ಸುದೀಪ್ ಅವ್ರಿಗೆ ಮೋದಿ ಹೇಳಿದ್ದೇನು ಗೊತ್ತಾ ?
ಕೆಲವು ದಿನಗಳ ಹಿಂದೆ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಸ್ಯಾಂಡಲ್ ವುಡ್ ಸ್ಟಾರ್ ನಟ ಸುದೀಪ್ ಅವರ ಹೇಳಿದ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ಅದನ್ನ ಪ್ರಶ್ನಿಸಿ ಟ್ವಿಟರ್ ವಾಗ್ವಾದ ಮಾಡಿದರು.
ಅದಾದ ಮೇಲೆ ಸುದೀಪ್ ಅವರ ಜಾಣತನದ ಉತ್ತರವನ್ನ ನೀಡಿ , ಅಜಯ ದೇವಗನ್ ಅವ್ರಿಗೆ ಅರಿವಾಗುವಂತೆ ಮಾಡಿದರು
ಆದ್ರೆ ಅಂದು ನಡೆದ ಟ್ವಿಟರ್ ವಾಗ್ವಾದವನ್ನ ಗಮನಿಸಿದ ಪ್ರಧಾನಿ ಮೋದಿ ಅವರು , ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಸಮಯದಲ್ಲಿ ಹೀಗೆ ಹೇಳಿದರು .
‘ಪ್ರಾದೇಶಿಕ ಭಾಷೆಗಳ ಕುರಿತಾಗಿ ನಡೆಯುತ್ತಿರುವ ವಿವಾದಗಳನ್ನು ಗಮನಿಸುತ್ತಿದ್ದೇನೆ. ಇದು ಆಗಬಾರದು. ನಾವುಗಳು ಪ್ರತಿಯೊಂದು ಭಾರತೀಯ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತೇವೆ. ಭಾಷೆಗಳ ಆಧಾರದ ಮೇಲೆ ವಿವಾದಗಳು ಆಗಬಾರದು . ಎಲ್ಲಾ ಭಾಷೆಗಳು ಪೂಜ್ಯನೀಯ. ಎಂದು ಹೇಳಿದರೆ .
ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ಅವ್ರು ಪ್ರಧಾನಿ ಮೋದಿಯವರ ಹೇಳಿಕೆಯನ್ನ ಸ್ವಾಗತಿಸಿ
ಪ್ರಧಾನಿಯವರ ಬಾಯಿಂದ ಕೆಲವು ಸಾಲುಗಳು ಹೊರಬಿದ್ದಿರುವುದು ಗೌರವ ಹಾಗು ಸೌಭಾಗ್ಯವಾಗಿದೆ. ಅವ್ರ ಭಾಷೆಯನ್ನ ಪ್ರೀತಿಸೋ ಪ್ರತಿಯೊಬ್ಬರಿಗೂ ದೇಶದ ಪ್ರಧಾನ ಮಂತ್ರಿ ಈ ರೀತಿ ಮಾತಾಡೋದನ್ನ ನೋಡುವುದೇ ಸಂತೋಸದ ವಿಷಯ . ನಾನು ಯಾರನ್ನೂ ವಿವಾದಕ್ಕೆ ತಗೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ, ಕೆಲವು ವಿಷಯಗಳಿಗೆ ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ. ಎಂದು ಸುದೀಪ್ ಅವರು ಪ್ರತಿಕ್ರಿಯೆ ನೀಡಿದರೆ
.jpg)



.jpg)






































