ಮೊನಾಲಿಸಾ ಪೇಂಟಿಂಗ್ ಹಿಂದಿರುವ ರೋಚಕ ಕಹಾನಿ
ಮೊನಾಲಿಸಾ ಚಿತ್ರ ಯಾರಿಗೆ ಇಷ್ಟವಾಗಲ್ಲಾ ಹೇಳಿ . ಕವಿಗಳಂತೂ ಮೊನಾಲಿಸಾ ನಗುವಿನಾ ಸಾರವನ್ನ ತಮ್ಮ ಕವಿತೆಗಳ ಮೂಲಕ ಹೋಗುಳುತ್ತಾನೆ ಇರುತ್ತಾರೆ .
| Photo by Eric TERRADE on Unsplash |
ಈ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರಾದ ಲಿಯೊನಾರ್ಡೊ ಡಾ ವಿನ್ಸಿ ಈ ವಿಶ್ವ ಕಂಡ ಅಮೋಘ ಪ್ರತಿಭೆ.ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಮೋಸ್ಟ್ ವ್ಯಾಲ್ಯೂಯೇಬಲ್ ಪೇ೦ಟಿಂಗ್ ಎಂದು ದಾಖಲಾಗುತ್ತದೆ. ಮೊನಾಲಿಸಾ ಇಡೀ ಜಗತ್ತಿನಲ್ಲೇ ಪ್ರಸಿದ್ದವಾದ , ಅತಿ ಹೆಚ್ಚು ಖರೀದಿಸಿದ ತೈಲ ವರ್ಣಚಿತ್ರವಾಗಿದೆ.ಈ ಚಿತ್ರದ ಬಗ್ಗೆ ಅನೇಕ ದಂತಕಥೆಗಳಿವೆ .
ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ ಲಿಸಾ ಗೆರಾರ್ಡಿನಿ ಯಾ ಚಿತ್ರ ಎಂದು ನಂಬಲಗಿದೆ . ಅವಳು ಫ್ಲಾರೆನ್ಸ್‌ನ ಫ್ರಾನ್ಸೆಸ್ಕೊ ಡೆಲ್ ಜಿಯೊಕೊಂಡೊ ಎಂಬ ಶ್ರೀಮಂತ ರೇಷ್ಮೆ ವ್ಯಾಪಾರಿಯ ಹೆಂಡತಿಯಾಗಿದ್ದಳು. ಅವರ ನೆನಪಿಗಾಗಿ ಇಟಲಿಯ ಲಿಯೊನಾರ್ಡೊ ಡಾ ವಿನ್ಸಿ ಎಂಬ ಚಿತ್ರಗಾರನಿಂದ ರಚಿಸಿದರು ಎಂದು ಹೇಳಲಾಗಿದೆ .
| Photo by Free Birds on Unsplash |
ಇನ್ನು ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ ಲಿಯೊನಾರ್ಡೊ ಡಾ ವಿನ್ಸಿ ಅವರ ತಾಯಿ ಯಾ ಚಿತ್ರವಾಗಿದೆ ಎಂದು ಹೇಳುತ್ತಾರೆ , ತಾಯಿಯನ್ನ ಅಪಾರವಾಗಿ ಪ್ರೀತಿಸುತ್ತಿದ್ದ ಲಿಯೊನಾರ್ಡೊ ಡಾ ವಿನ್ಸಿ ಅವರ ಸವಿನೆನಪಿಗಾಗಿ ಇದನ್ನ ಚಿತ್ರಿಸಿದರು ಎಂದು ಹೇಳಲಾಗಿದೆ . ಮತ್ತೊಂದು ಸಿದ್ಧಾಂತವು ವಾಸ್ತವವಾಗಿ ಲಿಯೊನಾರ್ಡೊ ಅವರ ಭಾವಚಿತ್ರವೇ ಮಹಿಳೆಯ ರೂಪದಲ್ಲಿ ಚಿತ್ರಿಸಿದರೆ ಎಂದು ಹೇಳಲಾಗಿದೆ .1519ರಲ್ಲಿ ಲಿಯೊನಾರ್ಡೊ ಡಾ ವಿನ್ಸಿ ಯಾ ಮರಣದ ನಂತರ ಭಾವಚಿತ್ರವನ್ನು ಫ್ರೆಂಚ್ ಅರಮನೆಗಳಲ್ಲಿ ಸೇರಿಸಲಾಯಿತು. ಇದು ರಾಜಮನೆತನದ ಸಂಗ್ರಹದ ಭಾಗವಾಯಿತು.
ಆದರೆ ಈ ಪೇಂಟಿಂಗ್ ಗೆ ಹೆಚ್ಚು ಪ್ರಚಾರ ಸಿಕ್ಕಿದು ಅದರ ಕಳ್ಳತನವಾದಗ
| Photo by Dabbas on Unsplash |
"ಮೋನಾಲಿಸಾ" ಚಿತ್ರವನ್ನ ವಿನ್ಸೆಂಜೊ ಪೆರುಗ್ಗಿಯಾ ಎಂಬ ಇಟಲಿಯ ಪ್ರಜೆ 1911 ರ ಆಗಸ್ಟ್ 20 ರಿಂದ 21 ರ ರಾತ್ರಿಯಲ್ಲಿ ಯಾರಿಗೂ ತಿಳಿಯದ ಹಾಗೆ ಅದನ್ನ ಕದ್ದನು. ಆತನ ಪ್ರಕಾರ ಈ ಚಿತ್ರವು ಇಟಲಿಗೆ ಸೇರಿದ್ದು , ಕಾರಣ ಲಿಯೊನಾರ್ಡೊ ಡಾ ವಿನ್ಸಿ ಇಟಲಿಯವನು ಆಗಿದ್ದ ಫ್ರಾನ್ಸ್ ಅದರ ಮೇಲೆ ಹಕ್ಕನ್ನು ಹೊಂದಿರುವುದು ಆತನಿಗೆ ಇಷ್ಟವಿರಲಿಲ್ಲಾ ಹಾಗಾಗಿ ಆತ ಅದನ್ನ ಕದ್ದನು .
ಆ ನಂತರ ಫ್ರಾನ್ಸ್ ಸರ್ಕಾರ ಎಲ್ಲಾ ಕಡೆ ಹುಡುಕಿದರೂ ಅವ್ರಿಗೆ ಈ ಪೇಂಟಿಂಗ್ ಸಿಗಲಿಲ್ಲಾ ಆದರೆ ಫ್ರಾನ್ಸ್ ಜನರು ಈ ವಿಷ್ಯವನ್ನ ಕೇಳಿ ಆಸಕ್ತಿಯಿಂದ ಪೇಂಟಿಂಗ್ ನೇತುಹಾಕಿದ ಜಾಗವನ್ನ ನೋಡಲು ಬರುತ್ತಿದ್ದರು ಇದ್ರಿಂದ ಫ್ರಾನ್ಸ್ ದೇಶದಲ್ಲಿ ಆ ಪೇಂಟಿಂಗ್ ವಿಶೇಷವಾದ ಸ್ಥಾನ ಪಡೆದಿತ್ತು ಎರಡು ವರ್ಷಗಳ ನಂತರ ಫ್ಲಾರೆನ್ಸ್‌ನಲ್ಲಿನ ಕಲಾ ವ್ಯಾಪಾರಿಯೊಬ್ಬರು ವ್ಯಕ್ತಿಯೊಬ್ಬರು ತನಗೆ ಮೊನಾಲಿಷಾ ಚಿತ್ರಕಲೆಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಫ್ರಾನ್ಸ್ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎಚೆತ್ತ ಫ್ರಾನ್ಸ್ ಸರ್ಕಾರ ಮೊನಾಲಿಸಾ ಚಿತ್ರ ಕದ್ದ ಕಳ್ಳನನ್ನ ಬಂದಿಸಿ , ಪೇಂಟಿಂಗ್ ನ್ನ ತನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ
ಆ ನಂತರ ಫ್ರಾನ್ಸ್ ಕಾನೂನಿನ ಪ್ರಕಾರ ಮೊನಾಲಿಸಾ ಪೇ೦ಟಿಂಗನ್ನು ಮಾರಲು ಅಥವಾ ಖರೀದಿಸಲು ಮಾಡುವ೦ತಿಲ್ಲ ಹಾಗು ಇದಕ್ಕೆ ಬೇಕಾದ ಸೂಕ್ತವಾದ ಭದ್ರತೆಯನ್ನ ಒದಗಿಸಿದರು. ಅಲ್ಲಿಂದ ಮೊನಾಲೀಶ ಪೇಂಟಿಂಗ್ ಜಗತ್ ಪ್ರಸಿದ್ಧವಾಗುತ್ತೆ


0 ಕಾಮೆಂಟ್‌ಗಳು:
ಕಾಮೆಂಟ್ ಪೋಸ್ಟ್ ಮಾಡಿ
ಇದಕ್ಕೆ ಸಬ್‌ಸ್ಕ್ರೈಬ್ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]
<< ಮುಖಪುಟ