ಸ್ಯಾಂಡಲ್ವುಡ್ ಸ್ಟಾರ್ ಗಳು ಯಾವ ಪ್ರಾಣಿಗಳನ್ನ ದತ್ತು ಪಡೆದಿದ್ದರೆ ಗೊತ್ತಾ ?
ಜಗತ್ತಿನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ವೈರಸ್ ಕೋರೋಣ ,ಇದರಿಂದ ಅದ ನಷ್ಟಗಳು ಪ್ರಾಣಹಾನಿಗಳು ಲೆಕ್ಕಕ್ಕೆ ಸಿಗದಷ್ಟು ..
ಭಾರತದಲ್ಲಿ ಸುಮಾರು 30 ರಿಂದ 40 ಮಿಲಿಯನ್ ಜನರು ತಮ್ಮ ಉದ್ಯೋಗವನ್ನುಕಳೆದುಕೊಂಡಿದ್ದಾರೆ ಮತ್ತು ಕ್ರೀಡಾ ,ಮನರಂಜನಾ ಉದ್ಯಮದಲ್ಲಿ ಹಾಗೂ ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಶತಕೋಟಿ ನಷ್ಟವಾಗಿದೆ .
ಈ ಕೊರೋನ ಕೇವಲ ಮನುಷ್ಯರಿಗೆ ಮಾತ್ರ ಅಲ್ಲಾ ಪ್ರಾಣಿಗಳಿಗೂ ಮಾರಕವಾಗಿದೆ . ಸಾಮಾನ್ಯವಾಗಿ ಪ್ರಾಣಿ ಸಂಗ್ರಹಾಲಯ, ಪ್ರಾಣಿಗಳ ಪಾಲನೆಗಾಗಿ ಟಿಕೆಟ್ ಸಂಗ್ರಹದಿಂದ ಬರುವ ಆದಾಯವನ್ನು ಅವಲಂಬಿಸಿರುತ್ತದೆ, ಆದ್ರೆ ಈ ಲೊಕ್ಡೌನ್ ಯಿಂದ, ಅದು ಸಾಧ್ಯವಾಗದೆ ಇದ್ದಾಗ ,
ಇವರ ಸಮಸ್ಯೆಯನ್ನ ಆಲಿಸಿದ ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿರುವ ದರ್ಶನ ತೂಗುದೀಪ್ ಅವರು ಒಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ,ಪ್ರಾಣಿಗಳ ದತ್ತು ತೆಗೆದುಕೊಳ್ಳೋವುದರ ಅಗತ್ಯವನ್ನು ಮನವರಿಕೆ ಮಾಡಿಕೊಡುತ್ತರೆ .
ಶಿವರಾಜ್ ಕುಮಾರ್ ಅವರು ಈ ಹಿಂದೆ "ಪಾರ್ವತಿ" ಎಂಬ ಮಹಿಳಾ ಆನೆಯನ್ನು ದತ್ತು ಪಡೆದರು.ಶಿವಣ್ಣನಿಗೆ ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳು ಎಂದ್ರೆ ತುಂಬಾ ಇಷ್ಟ ಹಾಗಾಗಿ ಅವ್ರು ಹೆಣ್ಣು ಆನೆಯನ್ನು ದತ್ತು ಪಡೆದುಕೊಂಡರು ,
"ಪಾರ್ವತಿ ಎಂಬ ಆನೆಯಿಂದ ನನಗೆ ಹೊಸ ಎನರ್ಜಿ ಬಂದಿದೆ ಹಾಗು ತನ್ನ ಅಮ್ಮ ನನ್ನ ಜೊತೆ ಇರುವ ಬಾವ ಆಗುತಿದ್ದೆ'' ಎಂದು ಹೇಳಿಕೆ ಕೊಟ್ಟಿದ್ದರು
ಸೃಜನ್ ಲೋಕೇಶ್ ಕೂಡ ಈ ಹಿಂದೆ ಅರ್ಜುನ ಎಂಬ ಹುಲಿಯನ್ನ ದತ್ತು ತಗೆದುಕೊಂಡಿದ್ದರು
ಹೀಗೆ ಅನೇಕ ಚಿತ್ರ ನಟರು ಹಾಗು ನಟಿಯರು ಕೂಡ ತಮ್ಮದೇ ರೀತಿಯಲ್ಲಿ ಪ್ರಾಣಿಗಳನ್ನ ದತ್ತು ತಗೆದುಕೊಂಡು ಕಾಪಾಡಿದ್ದರೆ ,
ನಿಮಗೂ ಪ್ರಾಣಿಗಳನ್ನ ದತ್ತು ತಗೆದುಕೊಳ್ಳೋ ಆಶೆ ಇದ್ರೆ ಈ ಕೂಡಲೇ zoos of Karnataka ಎಂಬ ಮೊಬೈಲ್ app ನ ಡೌನ್ಲೋಡ್ ಮಾಡಿ ನೊಂದಣಿ ಮಾಡಿಕೊಳ್ಳಿ , 5000ರೂ ಗಿಂತ ಹೆಚ್ಚು ಹಣವನ್ನು ಪಾವತಿಸುವರಿಗೆ ಮೃಗಾಲಯದಿಂದ zoo membership ಒಂದು ವರುಷವರೆಗೂ ಸಿಗುತ್ತದೆ
https://www.zoosofkarnataka.com/getinvolved#educationEventsSections
ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗು ವಿಚಾರವನ್ನು ಹಂಚಿಕೊಳ್ಳಿ








0 ಕಾಮೆಂಟ್‌ಗಳು:
ಕಾಮೆಂಟ್ ಪೋಸ್ಟ್ ಮಾಡಿ
ಇದಕ್ಕೆ ಸಬ್‌ಸ್ಕ್ರೈಬ್ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]
<< ಮುಖಪುಟ