ಸೋಮವಾರ, ಜೂನ್ 28, 2021

ನಮ್ಮ ಇತಿಹಾಸದಲ್ಲಿ ಮಾವಿನ ಹಣ್ಣಿನ ತಾಕತ್ತು ಹೇಗಿದೆ ಗೊತ್ತಾ ?

ತಿಂದಷ್ಟೂ ರುಚಿ ಮುಗಿದಷ್ಟು ಇನ್ನೂ ಬೇಕೆನ್ನೋ ಹಣ್ಣಿನ ಜಾಗದಲ್ಲಿ  ಮೊದಲನೇ  ಸ್ಥಾನವನ್ನ ನಮ್ಮ ಹಣ್ಣಿನ ರಾಜನಿಗೆ ಕೊಡ್ಬೇಕು.ಹಣ್ಣಿನ ರಾಜ ಅಂದ ಕೂಡಲೇ  ನಿಮ್ಮೆಲ್ಲರ ಬಾಯಿನಲ್ಲಿ ನೀರು ಬರುತ್ತಿರಬಹುದು ಆಲ್ವಾ,?ಅದೇ ನೋಡಿ ಮಾವಿನ ಹಣ್ಣಿನ ತಾಕತ್ತು. 


Photo by Riki Risnandar from Pexels

ಈ ಹಣ್ಣಿಗೆ ಮ್ಯಾಂಗೋವೆಂದು ಹೆಸರು ಬರುವುದಕ್ಕೆ ಕಾರಣವೇನು ಗೊತ್ತಾ ?  



ಮಾವಿನ ಹಣ್ಣುನನ್ನ ಹಿಂದೆ ಅಮ್ರಾ-ಫಾಲ್ ಎಂದು ಕರೆಯುತಿದ್ದರು ಎಂದು ನಮ್ಮ ವೈದಿಕ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಹೀಗೆ ಒಮ್ಮೆ ಕವಿ ಕಾಳಿದಾಸ ಅವರು ಮಾವಿನ ಹಣ್ಣಿನ ರುಚಿಗೆ ಮನಸೋತು ಅದರ ಬಗ್ಗೆ ಒಂದು ಸುಂದರವಾದ ಸ್ತುತಿಗೀತೆನ  ಬರೆದು ಹಾಡುತ್ತಾ ಹೊಗಳುತ್ತಿರುತ್ತಾರೆ . 


ಒಮ್ಮೆ ಅವರು ಹಾಡುತ್ತಾ ದಕ್ಷಿಣ ಭಾರತದ  ತಮಿಳುನಾಡನ್ನು ತಲುಪಿದಾಗ ಆ ಸ್ತುತಿಗೀತೆನ ಅಲ್ಲಿನ ಜನರು ಆಕರ್ಷಿತವಾಗಿ ಕೇಳಿ ಮಾವಿನ ಹಣ್ಣಿನ ಬಗ್ಗೆ ಕುತೂಹಲದಿಂದ ಮಾತಾಡುತ್ತಾರೆ .ಅಲ್ಲಿನ ಜನ  ಅಮ್ರಾ-ಫಾಲ್ ಎಂದು ಕರೆಯುತ್ತಿದ್ದ  ಮಾವಿನ ಹಣ್ಣುನ್ನ  ಆಮ್ - ಕೇ ಎಂದು ಉಚ್ಛರಿಸುತ್ತಾರೆ . 



Photo by Gowri Subramanya on Unsplash
ಅನಂತರ ಮಲಯಾಳಿ ಜನರು ಇದನ್ನ ಮಂಗಾ ಎಂದು ಉಚ್ಚಾರಣೆ ಮಾಡುತ್ತಾರೆ.ಕ್ರಮೇಣ ಕೇರಳಕ್ಕೆ ಬಂದ ಪ್ರೋಚುಗಿಸರು ಮಾವಿನ ಹಣ್ಣಿನ ಸಿಹಿಯನ್ನು ಸವಿದು ಮ್ಯಾಂಗೋ ಎಂದು ಉಚ್ಚರಿಸುತ್ತಾರೆ, ಅಂದಿನಿಂದ ಇಂಗ್ಲಿಷರ ಪಾಲಿಗೆ ಇದು ಮ್ಯಾಂಗೋವಾಗಿದೆ ನಮ್ಮ ಎಲ್ಲರ ಮಾವಿನ ಹಣ್ಣು . 





ಈ ಮಾವಿನ ಹಣ್ಣಿನ ಸಿಹಿಯ ಬಗ್ಗೆ ಅದ್ಭುತವಾಗಿ ಬರೆದು ವಿಶ್ವವಿಖ್ಯಾತ ಮಾಡಿದ  ಕೀರ್ತಿ ಕ್ರಿ.ಶ 632 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾದ ಪ್ರವಾಸಿ ಹ್ಸೀನ್-ತ್ಸಾಂಗ್ ಗೆ ಸೇರಬೇಕು . ಪ್ರವಾಸಿಗರಾಗಿ ಭಾರತಕ್ಕೆ ಬಂದ ಹ್ಸೀನ್-ತ್ಸಾಂಗ್ ,ಇಲ್ಲಿನ ವೇಷಭೂಷಣಗಳು ಆಹಾರ ಪದ್ದತಿಗಳನ್ನ ಅಭ್ಯಾಸ ಮಾಡುತ್ತಿರುತ್ತಾರೆ .


  ಆಗ ಅವರ ಮನ ಗೆದ್ದಿದು ಈ ನಮ್ಮ ಮಾವಿನ ಹಣ್ಣು ,ಇದರ ರುಚಿಗೆ ಸೋತ ಅವರು ಇದರ ಬಗ್ಗೆ ಎಲ್ಲಡೆ ಹೇಳಿದರು  

Photo by Deon Black on Unsplash
ನೋಡಿ,ಮಾವಿನ ಹಣ್ಣಿನ ರುಚಿಯಿಂದ ಇತಿಹಾಸದಲ್ಲಿ ಏನೆಲ್ಲಾ ಅಗಿದೆಂದು ,ಅದಕ್ಕೆ ಹೇಳೋದು ಹಣ್ಣುಗಳ ರಾಜ ಅಂತ . 
Photo by pariwat pannium on Unsplash

ಆ ನಂತರ ನಮ್ಮ ಭಾರತಕ್ಕೆ ಬಂದ ಮೊಘಲ್ ಸಾಮ್ರಾಜ್ಯದಲ್ಲಿ ಈ ಮಾವಿನ ಹಣ್ಣಿಗೆ ಇದ್ದ ಸ್ಥಾನ - ಮನ ಹಾಗೂ  ಮುಗಿಯಲಾರದ ನಂಟು ಹೇಗಿತ್ತು ಗೊತ್ತಾ ?


ಒಮ್ಮೆ ಮೊಘಲ್ ದೊರೆ ಬಾಬರ್ ಗೆ ,ಪಾಣಿಪತ್ ಕದನ ದಲ್ಲಿ ಇಬ್ರಾಹ್ಮಿನ್ ಲೋಧಿ ವಿರುದ್ಧ ಹೋರಾಡಲು ಆಹ್ವಾನವು  ಅಂದಿನ  ಆಡಳಿತಗಾರ ಲೋಧಿಯಿಂದ ಬರುತ್ತದೆ . ಆ ಸಮಯದಲ್ಲಿ  ಮೊಘಲರ  ಮನಸ್ಸನ್ನು ಹೇಗಾದರೂ ಮಾಡಿ ಗೆದ್ದು ಅವರನ್ನ ಯುದ್ಧದಲ್ಲಿ ಭಾಗವಹಿಸುವ ಹಾಗೆ ಮಾಡಬೇಕು ಎಂದು ಕಿಲಾಡಿ ಲೋದಿ ಮಾವಿನ ಹಣ್ಣನ್ನು ಆಹ್ವಾನ ಜೊತೆಗೆ ಸ್ನೇಹದ  ಕಾಣಿಕೆಯಾಗಿ ಸವಿಯಲು ಕಳಹಿಸಿಕೊಟ್ಟಿರುತ್ತಾನೆ .


Photo by cottonbro from Pexels

ಮಾವಿನ ಹಣ್ಣನ್ನು ಸವಿದ ಮೊಘಲ್ ದೊರೆ ಬಾಬರ್ ಲೋದಿಯ ಆಹ್ವಾನವನ್ನ ಸ್ವೀಕರಿಸಿ ಯುದ್ಧಕ್ಕೆ ಹೋಗುತ್ತಾನೆ .ಈ ಯುದ್ಧನೇ ಮುಂದೆ ಪಾಣಿಪತ್ ಯುದ್ಧ ಎಂದು ಪ್ರಸಿದ್ದಿ ಪಡೆಯುತ್ತದೆ. 

ಇಲ್ಲಿಂದ ಮಾವಿನ ಹಣ್ಣು ಹಾಗು ಮೊಘಲರ ನಂಟು ಭರ್ಜರಿಯಾಗಿ ಬೆಸೆದುಕೊಳ್ಳುತ್ತದೆ. ಒಂದು ತರ ಏಳೇಳು ಜನ್ಮದ ನಂಟಿನ ತರ 

Photo by Charles Deluvio on Unsplash

ಆ ನಂತರ ಬಂದ ಮೊಗಲ್ ದೊರೆ ಬಾಬರ್ ಅವರ ಪುತ್ರ ಹುಮಾಯೂನ್ ವರನ್ನು ಚೌಸಾ ಕದನದಲ್ಲಿ ಶೇರ್ ಷಾ ಸೂರಿ ಸೋಲಿಸಿದರು. ಆಗ ಹುಮಾಯೂನ್ ಭಾರತದಿಂದ ಪಲಾಯನ ಮಾಡಬೇಕಾಯಿತು ,ಹೀಗೆ ಓಡಿಹೋಗುವಾಗ ಅವನ ದಣಿವನ್ನ ನಿವಾರಿಸಲು ಜೊತೆಗೆ ಇದ್ದಿದು ಆಪ್ತರಕ್ಷಕ ಮಾವಿನ ಹಣ್ಣು .ನಂತರ ಆ ನೆನಪಿಗಾಗಿ ಮಾವಿನ ಹಣ್ಣಿನ ಒಂದು ಕಸಿಗೆ 'ಹುಮಾಯೂನ್ ಪಸಂದ್' ಎಂದು ಕರೆಯುತ್ತಾರೆ, ಅದೆ ಮಾವಿನ ಹಣ್ಣು ಈಗ ಇಮಾಮ್ ಪಸಂದ್ ಎಂದು ಪ್ರಸಿದ್ಧಿಯಾಗಿದೆ. 

 ಆ ನಂತರ ಬಂದ ಅಕ್ಬರ್ ನ  ಅರಮನೆಯಲ್ಲಿ ಹಾಗು ಮನಸ್ಸಿನಲ್ಲಿ ಮಾವಿನ ಹಣ್ಣಿಗೆ ವಿಶೇಷವಾದ ಜಾಗವಿತ್ತು . ಮಾವಿನ ಹಣ್ಣುಗಳನ್ನ ಸವಿಯಲು ಒಂದು ದೊಡ್ಡ ದೊಡ್ಡ ಉದ್ಯಾನವನ್ನು ನಿರ್ಮಿಸಿದರು ,ಅಲ್ಲಿ ಅವರು ಒಂದು ಲಕ್ಷ ಮಾವಿನ ಮರಗಳನ್ನು ನೆಟ್ಟರು .ಈ ಉದ್ಯಾನಕ್ಕೆ 'ಲಖಿ ಬಾಗ್' ಎಂದು ಹೆಸರಿಸಲಾಯಿತು.  

 ಆ ನಂತರ  ಬಂದ ಜಹಾಂಗೀರ್‌ಗೆ ಮಾವಿನಹಣ್ಣುಗಳು ಅಂದ್ರೆ ವಿಶೇಷವಾಗಿ ಪ್ರಿಯವಾಗಿದ್ದವು ,ಇವರು ಈ ಮಾವಿನ ಹಣ್ಣನು ಹೆಚ್ಚಾಗಿ ಪ್ರೀತಿಯ ಸಂಕೇತವಾಗಿ ಬಳಸುತ್ತಿದ್ದರು. 

 ಇವರ ಮನ ಗೆಲ್ಲಲು ಇವರ ಪ್ರಿಯ ಪತ್ನಿ ನೂರ್ ಜಹಾನ್ ಜಹಾಂಗೀರ್ ಗಾಗಿ ಮಾವಿನಹಣ್ಣು ಮತ್ತು ಗುಲಾಬಿಗಳಿಂದ ವೈನ್ ತಯಾರಿಸುತ್ತಿದ್ದರು. 

ಇವರು ಮಾವಿನ ಹಣ್ಣಿನಿಂದ ವಿವಿಧ ರೀತಿಯ ಪಾಕಗಳನ್ನ  ಮಾಡಿ ಸವಿಯುತ್ತಿದ್ದರು 


Photo by Arun Thomas from Pexels
 ಆ ನಂತರ ಬಂದ ರಾಜ ಷಹಜಹಾನ್ ಗೆ ಮಾವಿನ ಹಣ್ಣು ಅಂದ್ರೆ ಹುಚ್ಚು ಪ್ರೀತಿ ಅದಕೋಸ್ಕರ ಅವರು ಯಾರನ್ನೆಲ್ಲಾ ಎದರುಹಾಕಿಕೊಂಡರು  ಗೊತ್ತಾ ?

ಮ್ಮೆ ತನ್ನ ಅರಮನೆಯ ತೋಟದ ಮುಂದೆ ಮಾವಿನ ಮರಗಳನ್ನ ಹಾಕಿಸಿ , ಸಿಹಿಯಾದ ಹಣ್ಣುಗಳನ್ನ ಚಪರಿಸಲು ಪ್ರತಿ ದಿನ ಮಾವಿನ ಹಣ್ಣು ಆಗುವುದನ್ನ ಕಾಯುತ್ತ  ಹಣ್ಣಿಗಾಗಿ ಆಶೆಯ ಕಣ್ಣುಗಳಿಂದ ನೋಡುತ್ತಾ ಇರುತ್ತಾರೆ . 


Photo by Suraj R on Unsplash

ಹೀಗಿರುವಾಗ ಒಮ್ಮೆ ಇವರ ಮಗ ಔರಂಗಜೇಬ್ ಯಾರಿಗೂ ತಿಳಿಯದ ಹಾಗೆ ಎಲ್ಲಾ ಮಾವಿನ ಹಣ್ಣುಗಳನ್ನ ತಿನ್ನುತ್ತಾನೆ.  


ಮಾವಿನ ಹಣ್ಣಿಗಾಗಿ ಹಗಲು ಕನಸು ಕಾಣುತ್ತಿದ್ದ  ರಾಜ ಷಹಜಹಾನ್ ಗೆ ಮರದಲ್ಲಿ ಹಣ್ಣುಗಳು ಇಲ್ಲಾದಿರುವುದು ನೋಡಿ ಸಿಕ್ಕಾಪಟ್ಟೆ ಕೋಪಬರುತ್ತದೆ .ಅನಂತರ  ಹಣ್ಣುಗಳನ್ನ ಯಾರು ಕಿತ್ತಿದ್ದಾರೆ ಎಂದು ಪತ್ತೆಹಚ್ಚಲು ಹೋದಾಗ ತನ್ನ ಮಗ ಔರಂಗಜೇಬ್ ಈ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಾಗ ,ಸಿಟ್ಟಾದ ಷಹಜಹಾನ್ ಆತನನ್ನ  ಒಂದು ರೂಮಿನಲ್ಲಿ    ಕೂಡಿಹಾಕುತ್ತಾನೆ. ನಂತರ ಷಹಜಹಾನ್ ಗೆ  ಇದ್ದ  ಮಾವಿನಹಣ್ಣಿನ ಮೇಲಿನ  ಆ ದಿನದ ಆಶೆಯ ದಾಹವನ್ನ ನಿವಾರಿಸಲು  ಸಾಮ್ರಾಜ್ಯಶಾಹಿಯ  ಅಡಿಗೆಮನೆಯಲ್ಲಿ ಬಗೆಬಗೆಯ  ಪಾಕವಿಧಾನಗಳನ್ನು ತಯಾರಿಸಿ ಬಡಿಸುತ್ತಾರೆ.   

Photo by Daria Shevtsova from Pexels

 ವಿಶೇಷವೇನಂದ್ರೆ ಮುಂದೆ ಔರಂಗಜೇಬ್ ಗೆ ಹಿರಾಬಾಯ್ ಅವರೊಂದಿಗಿನ ಪ್ರೇಮಕಥೆಯು ಈ  ಮಾವಿನಹಣ್ಣಿನೊಂದಿಗೆ  ಹೆಣೆದುಕೊಂಡಿದೆ. 

ಒಮ್ಮೆ ಔರಂಗಜೇಬ ತನ್ನ ಆಂಟಿಯ ಮನೆಗೆ ಬಂದಾಗ ಇವರ ಕಣ್ಣುಗಳು  ಮಾವಿನ ಮರದಲ್ಲಿ ಹಣ್ಣನು ಕುಯುತ್ತಾ  ಹಾಡುತಿದ್ದ ಹಿರಾಬಾಯ್ ಕಡೆ ಹೋಗುತ್ತದೆ. ಮೊದಲ ನೋಟದ್ಲಲೇ ಮಾವಿನ ತೋಟದಲ್ಲಿ ಔರಂಗಜೇಬನಿಗೆ ಹಿರಾಬಾಯ್ ಮೇಲೆ ಪ್ರೀತಿಯಾಗುತ್ತದೆ ,ಅಲ್ಲಿಂದ ಆಗಿದ್ದು ಎಲ್ಲಾ  ಇತಿಹಾಸ 

ನೋಡಿದ್ರಲ್ಲಾ   ನಮ್ಮ ಮಾವಿನ ಹಣ್ಣು ಏನೆಲ್ಲಾ ಕಿತಾಪತಿ ಮಾಡಿದೆಂತ , ಇತಿಹಾಸದಲ್ಲಿ ತನ್ನದೇ ಅದ ಸ್ಥಾನವನ್ನು ತಗೆದ್ಕೊಂಡಿದೆ 

Photo by Ali Zolghadr on Unsplash


ಈಗ ಇಷ್ಟೊಂದು ಇತಿಹಾಸ ಇರುವ  ಮಾವಿನ ಹಣ್ಣಿನ ಬಗ್ಗೆ  ನಿಮ್ಮ ಅನಿಸಿಕೆ  ಏನೆಂದು  ಹಂಚಿಕೊಳ್ಳಿ
 











ಮಂಗಳವಾರ, ಜೂನ್ 8, 2021

ಮೂರನೇ ಅಲೆಗೆ ನೀವುಗಳು ಎಷ್ಟು ಸಿದ್ದರಾಗಿದೀರಾ ?


ಕೊರೋನಾ ಪ್ರಕರಣಗಳು ಕಡಿಮೆಯಾದ ತಕ್ಷಣ, ನಾವೆಲ್ಲರೂ ನಮಗಾದ  ನಷ್ಟ ಪ್ರಾಣಹಾನಿಗಳನ್ನ ಮರೆತು, ಬೇಕಾಬಿಟ್ಟಿ ಓಡಾಡುವುದು ಹಾಗೂ ಗುಂಪು ಗುಂಪಾಗಿ  ಸೇರುವುದು ಮಾಡಿದ್ರೆ, ಎರಡನೇ ಅಲೆಯ ವೈರಸ್ಗಿಂತ ವೇಗವಾಗಿ ಹಾಗೂ ಇನ್ನೂ ಹೆಚ್ಚು ಪ್ರಬಲವಾಗಿ ಮತೊಮ್ಮೆ ಕೊರೋನಾ ಹರಡುವುದು ಅಂತೂ ನಿಜ. 


3 ನೇ ಅಲೆಯು "ಅನಿವಾರ್ಯ" ಎಂದು ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಗವಾನ್ ಕೂಡ ಈಗಾಗಲೇ ಹೇಳಿದ್ದಾರೆ. ಅವರ ಪ್ರಕಾರ 3 ನೇ ಅಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಿದ್ದರೆ. 


ಆದ್ದರಿಂದ ನಾವುಗಳೆಲ್ಲಾ  3 ನೇ ಅಲೆಗೆ ಮಾನಸಿಕವಾಗಿ ಸಿದ್ಧರಾಗಿರಬೇಕು. 

ಅಂದಾಜಿನ ಪ್ರಕಾರ ಈಗ ನಡೆಯುತ್ತಿರುವ ಎರಡನೇ ಅಲೆಯು, ಜುಲೈ ವೇಳೆಗೆ ಇಳಿಯಲಿದೆ ಮತ್ತು ಮೂರನೇ ಅಲೆಯು  ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಬಹುದು. 

ಹಾಗಾದ್ರೆ ಇದನ್ನ ಹೇಗೆ ಎದುರಿಸಬೇಕು ?. ಇಲ್ಲಿದೆ ನೋಡಿ ಒಂದಿಷ್ಟು ಮಾಹಿತಿಗಳು 

  • ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನ ಒದಗಿಸಿ , ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಓದು ಮುಗಿಸಿರುವ ಡಾಕ್ಟರ್ ಹಾಗು ನರ್ಸ್ ಗಳಿಗೆ  ಅವಕಾಶ ಕೊಡಬೇಕು , 
  • ಗ್ರಾಮ ಮಟ್ಟದಲ್ಲಿನ  ವೈದ್ಯಕೀಯ ಸೌಲಭ್ಯಗಳನ್ನ ಉತ್ತಮ ಮಟ್ಟದಲ್ಲಿ ಮಾಡಬೇಕು , ಅದರ  ಸಂಪೂರ್ಣ ಜವಾಬ್ದಾರಿಯು ಆ ಊರಿನ ಜಿಲ್ಲಾಧಿಕಾರಿಯ ಮೇಲೆ ಇರಬೇಕು . 


  • ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದ ವೇಳೆಗೆ ಕನಿಷ್ಠ 80% ಜನಸಂಖ್ಯೆಗೆ 2 ಡೋಸ್ ವ್ಯಾಕ್ಸಿನೇಷನ್ ನೀಡುವುದು  ಸರ್ಕಾರದ  ಗುರಿಯಾಗಬೇಕು.  
  • ಈಗ ಮಂತ್ರಿ ಮಂಡಲದಲ್ಲಿ , ಕೋವಿಡ್ ನಿಯಂತ್ರಣಕ್ಕೆ ಬೇಕಾದ  ಹಾಗೆ ವಿಂಗಡಿಸಿರುವ  ಮಂತ್ರಿಮಂಡಲದ  ಕಾರ್ಯವು ಕೋವಿಡ್   ಸಂಪೂರ್ಣ ನಿಯಂತ್ರಣವಾಗುವರೆಗೂ ಮುಂದುವರೆಯಬೇಕು.  . 



  • ಮಕ್ಕಳಿಗೆ  ವ್ಯಾಕ್ಸಿನೇಷನ್ಗಾಗಿ  ಕ್ಲಿನಿಕಲ್ ಪ್ರಯೋಗಗಳು ಅತಿ ಬೇಗ ಶುರು ಆಗ್ಬೇಕು 
           



  •  ಕೋವಿಡ್ ಸಂಬಂಧಿತ ಕೆಲವು  ನಿರ್ಬಂಧಗಳು ಈಗಿರುವ ಹಾಗೆ  ಮುಂದುವರೆಯಬೇಕು. ಯಾರೇ  ವ್ಯಕ್ತಿ ಮಾಸ್ಕ ಹಾಕದೆ ಇದ್ದರೆ ಹಾಗು ಮೂಗಿನ ಕೆಳಗೆ ಮಾಸ್ಕ ಹಾಕಿದ್ರೆ ಅವ್ರಿಗೆ ಅರಿವು ಆಗೋ ಹಾಗೆ ದಂಡವನ್ನ ವಿಧಿಸಬೇಕು.  





  • ಮಾಸ್ಕ ಜೊತೆಗೆ ಹ್ಯಾಂಡ್ ಗ್ಲೋವ್ಸ್ ನ್ನ ಹಾಕಲು ಆದೇಶಿಸಬೇಕು ಹಾಗೂ  ಖಡ್ಡಾಯ ಮಾಡಬೇಕು . 

             


  • ಕೋವಿಡ್ ಫೋರ್ಸ್ ತಂಡದ ರಚನೆಯಾಗಬೇಕು .ಹೇಗೆ ಟ್ರಾಫಿಕ್ ಫೋಲಿಸ್  ಇರುತ್ತಾರೋ ಹಾಗೆ ಕೋವಿಡ್ ಫೋರ್ಸ್ ರಚನೆಯಾಗಿ,  ಯಾರೇ  ಕೋವಿಡ್ ಸಂಬಂಧಿತ ನಿರ್ಬಂಧಗಳನ್ನ  ಮುರಿದರೆ ಮತ್ತು ಗುಂಪು ಗುಂಪಾಗಿ  ಸೇರಿದ್ರೆ ಅವ್ರಿಗೆ ತಕ್ಕ ಶಿಕ್ಷೆಯಾಗವ ಹಾಗೆ ಕಾನೂನುಗಳನ್ನ ಜಾರಿಗಳಿಸಬೇಕು ಹಾಗೂ  ಇವರುಗಳು ಕೋವಿಡ್ ನಿಯಂತ್ರಣದ ರೂವಾರಿಗಳು  ಆಗ್ಬೇಕು 

       


  • ಹೊರದೇಶದಿಂದ ಬರುವರಿಗೆ 15 ದಿನಗಳವರೆಗೂ  ಕ್ವಾರಂಟೈನ್ ಮಾಡಲೇಬೇಕು.  



  • ಕಂಪೆನಿಗಳಲ್ಲಿ ಅಗತ್ಯವಿರುವರು ಮಾತ್ರ ಪ್ರತಿ ದಿನ ಹೋಗುವ ವ್ಯವಸ್ಥೆ ಶುರುವಾಗಬೇಕು . ಹೆಚ್ಚಿನ ಜನರು ಮನೆಯಿಂದಾನೆ ಕೆಲಸ ಮಾಡೋ ತರ ಆಗ್ಬೇಕು , ಸರ್ಕಾರವೇ ಅಧಿಕಾರಿಗಳನ್ನ  ನಿಯಮಿಸಿ ಅಗತ್ಯ ಇರುವರಿಗೆ ಮಾತ್ರ ಅವ್ರ ಹುದ್ದೆಗೆ ತಕ್ಕ ಹಾಗೆ ಪ್ರತಿ ದಿನ ಹೋಗಲು ಪಾಸ್ ಗಳನ್ನ ತಿಂಗಳಿಗೊಮ್ಮೆ ಕೊಡಬೇಕು.   

 

  • ಹತ್ತಕ್ಕಿಂತ  ಹೆಚ್ಚು  ಜನ ಸೇರುವ ಎಲ್ಲಾ ರೀತಿಯ ಸೋಶಿಯಲ್ ಆಕ್ಟಿವಿಟಿಗಳನ್ನ ನಿಷೇದ್ದ ಮಾಡಲೇಬೇಕು , ನಿಯಮ ಮೀರಿದ್ದರೆ ತಕ್ಕ ಶಿಕ್ಷೆ ಹಾಗು ದಂಡವನ್ನು ಹಾಕಬೇಕು .  



  • ಜನರು ತಮ್ಮ ಮನೆಯಲ್ಲಿ ಇಮ್ಮ್ಯೂನಿಟಿ ಹೆಚ್ಚಿಸುವ ಆಹಾರಗಳನ್ನ  ಸೇವಿಸುವುದು  ಹಾಗೂ  ಯೋಗ ಮಾಡುವುದನ್ನ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. 




ಸರ್ಕಾರ  ಕೊರೋನಾ ವಿರುದ್ಧ ಹೋರಾಡಲು  ಹೊರಡಿಸುವ  ಆದೇಶಗಳನ್ನ ಜನಗಳು ನೆಗ್ಲೆಕ್ಟ್ ಮಾಡದೇ ಪಾಲಿಸಬೇಕು . 

ನೆನಪಿರಲಿ ಕೋವಿಡ್ ನ ಜೊತೆ ಹೋರಾಟ ಬರಿ ಸರ್ಕಾರದ ಹೊಣೆಯಲ್ಲ , ನಮ್ಮ ನಿಮ್ಮಲ್ಲೇರ ಹಕ್ಕು ಕೂಡ ಜನ ಹಾಗು ಸರ್ಕಾರ ಜೊತೆಯಾದ್ರೆ  ಮಾತ್ರ ಕೋವಿಡ್ ನ್ನ ತಡೆಯಬಹುದು,

ನಮ್ಮ ನೆಗ್ಲೆಕ್ಟ್ ಯಿಂದ ಎರಡನೇ ಅಲೆಯಲ್ಲಿ ಸಾಕಷ್ಟು ನಷ್ಟಗಳನ್ನ ಅನುಭವಿಸಿದಿವಿ . ಈಗಲಾದ್ರೂ ನಾವುಗಳು ಬುದ್ದಿ ಕಲಿಯೋಣ ಹಾಗೂ  ನಮ್ಮ  ಸುತ್ತಮುತ್ತಲಿರುವರನ್ನ ಬುದ್ದಿವಂತರಾಗಿಸಿ  ಕೋವಿಡ್ ವಿರುದ್ಧ ಹೋರಾಡಿ ನಮ್ಮವರನ್ನ ಉಳಿಸಿಕೊಳ್ಳೋಣ.   

ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗು ವಿಚಾರವನ್ನು ಹಂಚಿಕೊಳ್ಳಿ 

ಸ್ಯಾಂಡಲ್ವುಡ್ ಸ್ಟಾರ್ ಗಳು ಯಾವ ಪ್ರಾಣಿಗಳನ್ನ ದತ್ತು ಪಡೆದಿದ್ದರೆ ಗೊತ್ತಾ ?

ಜಗತ್ತಿನ ಲೆಕ್ಕಾಚಾರವನ್ನೇ  ಬುಡಮೇಲು ಮಾಡಿದ ವೈರಸ್ ಕೋರೋಣ ,ಇದರಿಂದ  ಅದ  ನಷ್ಟಗಳು ಪ್ರಾಣಹಾನಿಗಳು ಲೆಕ್ಕಕ್ಕೆ ಸಿಗದಷ್ಟು ..





ಭಾರತದಲ್ಲಿ ಸುಮಾರು  30 ರಿಂದ 40 ಮಿಲಿಯನ್ ಜನರು ತಮ್ಮ ಉದ್ಯೋಗವನ್ನುಕಳೆದುಕೊಂಡಿದ್ದಾರೆ  ಮತ್ತು ಕ್ರೀಡಾ ,ಮನರಂಜನಾ ಉದ್ಯಮದಲ್ಲಿ  ಹಾಗೂ ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ  ವಿಶ್ವದಾದ್ಯಂತ ಶತಕೋಟಿ ನಷ್ಟವಾಗಿದೆ . 




ಈ ಕೊರೋನ  ಕೇವಲ ಮನುಷ್ಯರಿಗೆ ಮಾತ್ರ ಅಲ್ಲಾ ಪ್ರಾಣಿಗಳಿಗೂ ಮಾರಕವಾಗಿದೆ . ಸಾಮಾನ್ಯವಾಗಿ ಪ್ರಾಣಿ ಸಂಗ್ರಹಾಲಯ, ಪ್ರಾಣಿಗಳ  ಪಾಲನೆಗಾಗಿ ಟಿಕೆಟ್ ಸಂಗ್ರಹದಿಂದ ಬರುವ ಆದಾಯವನ್ನು ಅವಲಂಬಿಸಿರುತ್ತದೆ, ಆದ್ರೆ ಈ ಲೊಕ್ಡೌನ್ ಯಿಂದ, ಅದು  ಸಾಧ್ಯವಾಗದೆ ಇದ್ದಾಗ ,

ಇವರ ಸಮಸ್ಯೆಯನ್ನ ಆಲಿಸಿದ  ಕರ್ನಾಟಕ ಅರಣ್ಯ ಇಲಾಖೆಯ ಬ್ರಾಂಡ್ ಅಂಬಾಸಿಡರ್ ಆಗಿರುವ ದರ್ಶನ ತೂಗುದೀಪ್  ಅವರು  ಒಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ,ಪ್ರಾಣಿಗಳ  ದತ್ತು ತೆಗೆದುಕೊಳ್ಳೋವುದರ  ಅಗತ್ಯವನ್ನು ಮನವರಿಕೆ  ಮಾಡಿಕೊಡುತ್ತರೆ  . 


  
 "ಈ ಮಾರಕ ದಿನಗಳು ಪ್ರಾಣಿಸಂಗ್ರಹಾಲಯಗಳ ಪ್ರಾಣಿಗಳ ಆಹಾರ ಹಾಗು ಅವುಗಳ ಪಾಲನೆಯ ಮೇಲೆ ಪರಿಣಾಮ ಬೀರುವುದರಿಂದ ಪ್ರಾಣಿಗಳಿಗೆ ಹಾನಿಯಾಗುವ ಸಂಭವವಿದೆ.  ಹಾಗಾಗಿ ಅವುಗಳನ್ನ ಕಾಪಾಡುವುದು ನಮ್ಮ ಹಕ್ಕು ,
ನಾವು ನೀವುಗಳು ನಗದು ನೀಡುವ ಮೂಲಕ ಅಥವಾ ಪ್ರಾಣಿಗಳನ್ನ  ದತ್ತು ಸ್ವೀಕರಿಸುವ ಮೂಲಕ ಮೃಗಾಲಯದ ಜೀವಿಗಳನ್ನು  ತುರ್ತು ಪರಿಸ್ಥಿತಿಯಲ್ಲಿ ಕಾಪಾಡಬಹುದು , ಎಂದು ಹೇಳಿದಾಗ  







ಇವರ ಮಾತಿಗೆ ಓಗೊಟ್ಟು  ಅನೇಕ ಜನರು ಮುಂದೆ ಬಂದು ಪ್ರಾಣಿಗಳಿಗೆ  ದೇಣಿಗೆ ಕೊಡುತ್ತಾ ಇದ್ದಾರೆ  ಇದರಿಂದ ಸುಮಾರು 25 ಲಕ್ಷ ರೂ. ಕರ್ನಾಟಕದ ಮೃಗಾಲಯ ದೇಣಿಗೆ ಬಂದಿದೆ ಎಂದು  ಪ್ರಾಧಿಕಾರದ ಭಾಗ ಕಾರ್ಯದರ್ಶಿ ಬಿ.ಪಿ.ರವಿ ಹೇಳುತ್ತಾರೆ

ಈ ಒಂದು ಕಾರ್ಯಕ್ಕೆ ನಾವು ನೀವು ದರ್ಶನ ತೂಗುದೀಪ್ ಗೆ ಧನ್ಯವಾದ ಹೇಳಲೇಬೇಕು, ಪ್ರಾಣಿಗಳ ಬಗ್ಗೆ ಅವ್ರಿಗೆ ಇರುವ ಅಗಾಧವಾದ ಪ್ರೀತಿ ಇಂದು ನಿನ್ನೆಯದಲ್ಲಾ . 
 ದರ್ಶನವರು  2010ರಲ್ಲಿ ಒಂದು ಆನೆಯನ್ನ ತಮ್ಮ ಮಗನಿಗೋಸ್ಕರ ದತ್ತು ತಗೆದುಕೊಂಡಿದರು ,

ಮೃಗಾಲಯದವ್ರ ಪ್ರಕಾರ, ಪ್ರಾಣಿಗಳನ್ನು ದತ್ತು ಸ್ವೀಕರಿಸಿದ ಮೊದಲ ಕನ್ನಡ ಚಲನಚಿತ್ರ ತಾರೆ ದರ್ಶನ್ ಅವರು ಆಗಿದ್ದರೆ . 

ಅನಂತರ ಅನೇಕ ನಮ್ಮ ಕನ್ನಡ ಚಲನಚಿತ್ರ ನಟ ನಟಿಯರು ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದರೆ 

ಶಿವರಾಜ್ ಕುಮಾರ್ ಅವರು ಈ ಹಿಂದೆ "ಪಾರ್ವತಿ" ಎಂಬ ಮಹಿಳಾ ಆನೆಯನ್ನು ದತ್ತು ಪಡೆದರು.ಶಿವಣ್ಣನಿಗೆ ಸಾಮಾನ್ಯವಾಗಿ ದೊಡ್ಡ ಪ್ರಾಣಿಗಳು ಎಂದ್ರೆ ತುಂಬಾ ಇಷ್ಟ ಹಾಗಾಗಿ ಅವ್ರು ಹೆಣ್ಣು ಆನೆಯನ್ನು ದತ್ತು ಪಡೆದುಕೊಂಡರು , 

"ಪಾರ್ವತಿ ಎಂಬ ಆನೆಯಿಂದ ನನಗೆ  ಹೊಸ ಎನರ್ಜಿ ಬಂದಿದೆ ಹಾಗು ತನ್ನ ಅಮ್ಮ ನನ್ನ ಜೊತೆ ಇರುವ ಬಾವ ಆಗುತಿದ್ದೆ'' ಎಂದು ಹೇಳಿಕೆ ಕೊಟ್ಟಿದ್ದರು 

ಸೃಜನ್ ಲೋಕೇಶ್ ಕೂಡ ಈ ಹಿಂದೆ ಅರ್ಜುನ ಎಂಬ ಹುಲಿಯನ್ನ ದತ್ತು ತಗೆದುಕೊಂಡಿದ್ದರು 


ಹೀಗೆ ಅನೇಕ ಚಿತ್ರ ನಟರು ಹಾಗು ನಟಿಯರು ಕೂಡ ತಮ್ಮದೇ ರೀತಿಯಲ್ಲಿ ಪ್ರಾಣಿಗಳನ್ನ ದತ್ತು ತಗೆದುಕೊಂಡು ಕಾಪಾಡಿದ್ದರೆ ,


ನಿಮಗೂ ಪ್ರಾಣಿಗಳನ್ನ ದತ್ತು ತಗೆದುಕೊಳ್ಳೋ ಆಶೆ ಇದ್ರೆ ಈ ಕೂಡಲೇ zoos  of Karnataka  ಎಂಬ ಮೊಬೈಲ್ app ನ  ಡೌನ್ಲೋಡ್ ಮಾಡಿ ನೊಂದಣಿ ಮಾಡಿಕೊಳ್ಳಿ , 5000ರೂ ಗಿಂತ ಹೆಚ್ಚು ಹಣವನ್ನು ಪಾವತಿಸುವರಿಗೆ ಮೃಗಾಲಯದಿಂದ  zoo membership ಒಂದು ವರುಷವರೆಗೂ ಸಿಗುತ್ತದೆ 

https://www.zoosofkarnataka.com/getinvolved#educationEventsSections

ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗು ವಿಚಾರವನ್ನು ಹಂಚಿಕೊಳ್ಳಿ