ಸೋಮವಾರ, ಜೂನ್ 28, 2021

ನಮ್ಮ ಇತಿಹಾಸದಲ್ಲಿ ಮಾವಿನ ಹಣ್ಣಿನ ತಾಕತ್ತು ಹೇಗಿದೆ ಗೊತ್ತಾ ?

ತಿಂದಷ್ಟೂ ರುಚಿ ಮುಗಿದಷ್ಟು ಇನ್ನೂ ಬೇಕೆನ್ನೋ ಹಣ್ಣಿನ ಜಾಗದಲ್ಲಿ  ಮೊದಲನೇ  ಸ್ಥಾನವನ್ನ ನಮ್ಮ ಹಣ್ಣಿನ ರಾಜನಿಗೆ ಕೊಡ್ಬೇಕು.ಹಣ್ಣಿನ ರಾಜ ಅಂದ ಕೂಡಲೇ  ನಿಮ್ಮೆಲ್ಲರ ಬಾಯಿನಲ್ಲಿ ನೀರು ಬರುತ್ತಿರಬಹುದು ಆಲ್ವಾ,?ಅದೇ ನೋಡಿ ಮಾವಿನ ಹಣ್ಣಿನ ತಾಕತ್ತು. 


Photo by Riki Risnandar from Pexels

ಈ ಹಣ್ಣಿಗೆ ಮ್ಯಾಂಗೋವೆಂದು ಹೆಸರು ಬರುವುದಕ್ಕೆ ಕಾರಣವೇನು ಗೊತ್ತಾ ?  



ಮಾವಿನ ಹಣ್ಣುನನ್ನ ಹಿಂದೆ ಅಮ್ರಾ-ಫಾಲ್ ಎಂದು ಕರೆಯುತಿದ್ದರು ಎಂದು ನಮ್ಮ ವೈದಿಕ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಹೀಗೆ ಒಮ್ಮೆ ಕವಿ ಕಾಳಿದಾಸ ಅವರು ಮಾವಿನ ಹಣ್ಣಿನ ರುಚಿಗೆ ಮನಸೋತು ಅದರ ಬಗ್ಗೆ ಒಂದು ಸುಂದರವಾದ ಸ್ತುತಿಗೀತೆನ  ಬರೆದು ಹಾಡುತ್ತಾ ಹೊಗಳುತ್ತಿರುತ್ತಾರೆ . 


ಒಮ್ಮೆ ಅವರು ಹಾಡುತ್ತಾ ದಕ್ಷಿಣ ಭಾರತದ  ತಮಿಳುನಾಡನ್ನು ತಲುಪಿದಾಗ ಆ ಸ್ತುತಿಗೀತೆನ ಅಲ್ಲಿನ ಜನರು ಆಕರ್ಷಿತವಾಗಿ ಕೇಳಿ ಮಾವಿನ ಹಣ್ಣಿನ ಬಗ್ಗೆ ಕುತೂಹಲದಿಂದ ಮಾತಾಡುತ್ತಾರೆ .ಅಲ್ಲಿನ ಜನ  ಅಮ್ರಾ-ಫಾಲ್ ಎಂದು ಕರೆಯುತ್ತಿದ್ದ  ಮಾವಿನ ಹಣ್ಣುನ್ನ  ಆಮ್ - ಕೇ ಎಂದು ಉಚ್ಛರಿಸುತ್ತಾರೆ . 



Photo by Gowri Subramanya on Unsplash
ಅನಂತರ ಮಲಯಾಳಿ ಜನರು ಇದನ್ನ ಮಂಗಾ ಎಂದು ಉಚ್ಚಾರಣೆ ಮಾಡುತ್ತಾರೆ.ಕ್ರಮೇಣ ಕೇರಳಕ್ಕೆ ಬಂದ ಪ್ರೋಚುಗಿಸರು ಮಾವಿನ ಹಣ್ಣಿನ ಸಿಹಿಯನ್ನು ಸವಿದು ಮ್ಯಾಂಗೋ ಎಂದು ಉಚ್ಚರಿಸುತ್ತಾರೆ, ಅಂದಿನಿಂದ ಇಂಗ್ಲಿಷರ ಪಾಲಿಗೆ ಇದು ಮ್ಯಾಂಗೋವಾಗಿದೆ ನಮ್ಮ ಎಲ್ಲರ ಮಾವಿನ ಹಣ್ಣು . 





ಈ ಮಾವಿನ ಹಣ್ಣಿನ ಸಿಹಿಯ ಬಗ್ಗೆ ಅದ್ಭುತವಾಗಿ ಬರೆದು ವಿಶ್ವವಿಖ್ಯಾತ ಮಾಡಿದ  ಕೀರ್ತಿ ಕ್ರಿ.ಶ 632 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಚೀನಾದ ಪ್ರವಾಸಿ ಹ್ಸೀನ್-ತ್ಸಾಂಗ್ ಗೆ ಸೇರಬೇಕು . ಪ್ರವಾಸಿಗರಾಗಿ ಭಾರತಕ್ಕೆ ಬಂದ ಹ್ಸೀನ್-ತ್ಸಾಂಗ್ ,ಇಲ್ಲಿನ ವೇಷಭೂಷಣಗಳು ಆಹಾರ ಪದ್ದತಿಗಳನ್ನ ಅಭ್ಯಾಸ ಮಾಡುತ್ತಿರುತ್ತಾರೆ .


  ಆಗ ಅವರ ಮನ ಗೆದ್ದಿದು ಈ ನಮ್ಮ ಮಾವಿನ ಹಣ್ಣು ,ಇದರ ರುಚಿಗೆ ಸೋತ ಅವರು ಇದರ ಬಗ್ಗೆ ಎಲ್ಲಡೆ ಹೇಳಿದರು  

Photo by Deon Black on Unsplash
ನೋಡಿ,ಮಾವಿನ ಹಣ್ಣಿನ ರುಚಿಯಿಂದ ಇತಿಹಾಸದಲ್ಲಿ ಏನೆಲ್ಲಾ ಅಗಿದೆಂದು ,ಅದಕ್ಕೆ ಹೇಳೋದು ಹಣ್ಣುಗಳ ರಾಜ ಅಂತ . 
Photo by pariwat pannium on Unsplash

ಆ ನಂತರ ನಮ್ಮ ಭಾರತಕ್ಕೆ ಬಂದ ಮೊಘಲ್ ಸಾಮ್ರಾಜ್ಯದಲ್ಲಿ ಈ ಮಾವಿನ ಹಣ್ಣಿಗೆ ಇದ್ದ ಸ್ಥಾನ - ಮನ ಹಾಗೂ  ಮುಗಿಯಲಾರದ ನಂಟು ಹೇಗಿತ್ತು ಗೊತ್ತಾ ?


ಒಮ್ಮೆ ಮೊಘಲ್ ದೊರೆ ಬಾಬರ್ ಗೆ ,ಪಾಣಿಪತ್ ಕದನ ದಲ್ಲಿ ಇಬ್ರಾಹ್ಮಿನ್ ಲೋಧಿ ವಿರುದ್ಧ ಹೋರಾಡಲು ಆಹ್ವಾನವು  ಅಂದಿನ  ಆಡಳಿತಗಾರ ಲೋಧಿಯಿಂದ ಬರುತ್ತದೆ . ಆ ಸಮಯದಲ್ಲಿ  ಮೊಘಲರ  ಮನಸ್ಸನ್ನು ಹೇಗಾದರೂ ಮಾಡಿ ಗೆದ್ದು ಅವರನ್ನ ಯುದ್ಧದಲ್ಲಿ ಭಾಗವಹಿಸುವ ಹಾಗೆ ಮಾಡಬೇಕು ಎಂದು ಕಿಲಾಡಿ ಲೋದಿ ಮಾವಿನ ಹಣ್ಣನ್ನು ಆಹ್ವಾನ ಜೊತೆಗೆ ಸ್ನೇಹದ  ಕಾಣಿಕೆಯಾಗಿ ಸವಿಯಲು ಕಳಹಿಸಿಕೊಟ್ಟಿರುತ್ತಾನೆ .


Photo by cottonbro from Pexels

ಮಾವಿನ ಹಣ್ಣನ್ನು ಸವಿದ ಮೊಘಲ್ ದೊರೆ ಬಾಬರ್ ಲೋದಿಯ ಆಹ್ವಾನವನ್ನ ಸ್ವೀಕರಿಸಿ ಯುದ್ಧಕ್ಕೆ ಹೋಗುತ್ತಾನೆ .ಈ ಯುದ್ಧನೇ ಮುಂದೆ ಪಾಣಿಪತ್ ಯುದ್ಧ ಎಂದು ಪ್ರಸಿದ್ದಿ ಪಡೆಯುತ್ತದೆ. 

ಇಲ್ಲಿಂದ ಮಾವಿನ ಹಣ್ಣು ಹಾಗು ಮೊಘಲರ ನಂಟು ಭರ್ಜರಿಯಾಗಿ ಬೆಸೆದುಕೊಳ್ಳುತ್ತದೆ. ಒಂದು ತರ ಏಳೇಳು ಜನ್ಮದ ನಂಟಿನ ತರ 

Photo by Charles Deluvio on Unsplash

ಆ ನಂತರ ಬಂದ ಮೊಗಲ್ ದೊರೆ ಬಾಬರ್ ಅವರ ಪುತ್ರ ಹುಮಾಯೂನ್ ವರನ್ನು ಚೌಸಾ ಕದನದಲ್ಲಿ ಶೇರ್ ಷಾ ಸೂರಿ ಸೋಲಿಸಿದರು. ಆಗ ಹುಮಾಯೂನ್ ಭಾರತದಿಂದ ಪಲಾಯನ ಮಾಡಬೇಕಾಯಿತು ,ಹೀಗೆ ಓಡಿಹೋಗುವಾಗ ಅವನ ದಣಿವನ್ನ ನಿವಾರಿಸಲು ಜೊತೆಗೆ ಇದ್ದಿದು ಆಪ್ತರಕ್ಷಕ ಮಾವಿನ ಹಣ್ಣು .ನಂತರ ಆ ನೆನಪಿಗಾಗಿ ಮಾವಿನ ಹಣ್ಣಿನ ಒಂದು ಕಸಿಗೆ 'ಹುಮಾಯೂನ್ ಪಸಂದ್' ಎಂದು ಕರೆಯುತ್ತಾರೆ, ಅದೆ ಮಾವಿನ ಹಣ್ಣು ಈಗ ಇಮಾಮ್ ಪಸಂದ್ ಎಂದು ಪ್ರಸಿದ್ಧಿಯಾಗಿದೆ. 

 ಆ ನಂತರ ಬಂದ ಅಕ್ಬರ್ ನ  ಅರಮನೆಯಲ್ಲಿ ಹಾಗು ಮನಸ್ಸಿನಲ್ಲಿ ಮಾವಿನ ಹಣ್ಣಿಗೆ ವಿಶೇಷವಾದ ಜಾಗವಿತ್ತು . ಮಾವಿನ ಹಣ್ಣುಗಳನ್ನ ಸವಿಯಲು ಒಂದು ದೊಡ್ಡ ದೊಡ್ಡ ಉದ್ಯಾನವನ್ನು ನಿರ್ಮಿಸಿದರು ,ಅಲ್ಲಿ ಅವರು ಒಂದು ಲಕ್ಷ ಮಾವಿನ ಮರಗಳನ್ನು ನೆಟ್ಟರು .ಈ ಉದ್ಯಾನಕ್ಕೆ 'ಲಖಿ ಬಾಗ್' ಎಂದು ಹೆಸರಿಸಲಾಯಿತು.  

 ಆ ನಂತರ  ಬಂದ ಜಹಾಂಗೀರ್‌ಗೆ ಮಾವಿನಹಣ್ಣುಗಳು ಅಂದ್ರೆ ವಿಶೇಷವಾಗಿ ಪ್ರಿಯವಾಗಿದ್ದವು ,ಇವರು ಈ ಮಾವಿನ ಹಣ್ಣನು ಹೆಚ್ಚಾಗಿ ಪ್ರೀತಿಯ ಸಂಕೇತವಾಗಿ ಬಳಸುತ್ತಿದ್ದರು. 

 ಇವರ ಮನ ಗೆಲ್ಲಲು ಇವರ ಪ್ರಿಯ ಪತ್ನಿ ನೂರ್ ಜಹಾನ್ ಜಹಾಂಗೀರ್ ಗಾಗಿ ಮಾವಿನಹಣ್ಣು ಮತ್ತು ಗುಲಾಬಿಗಳಿಂದ ವೈನ್ ತಯಾರಿಸುತ್ತಿದ್ದರು. 

ಇವರು ಮಾವಿನ ಹಣ್ಣಿನಿಂದ ವಿವಿಧ ರೀತಿಯ ಪಾಕಗಳನ್ನ  ಮಾಡಿ ಸವಿಯುತ್ತಿದ್ದರು 


Photo by Arun Thomas from Pexels
 ಆ ನಂತರ ಬಂದ ರಾಜ ಷಹಜಹಾನ್ ಗೆ ಮಾವಿನ ಹಣ್ಣು ಅಂದ್ರೆ ಹುಚ್ಚು ಪ್ರೀತಿ ಅದಕೋಸ್ಕರ ಅವರು ಯಾರನ್ನೆಲ್ಲಾ ಎದರುಹಾಕಿಕೊಂಡರು  ಗೊತ್ತಾ ?

ಮ್ಮೆ ತನ್ನ ಅರಮನೆಯ ತೋಟದ ಮುಂದೆ ಮಾವಿನ ಮರಗಳನ್ನ ಹಾಕಿಸಿ , ಸಿಹಿಯಾದ ಹಣ್ಣುಗಳನ್ನ ಚಪರಿಸಲು ಪ್ರತಿ ದಿನ ಮಾವಿನ ಹಣ್ಣು ಆಗುವುದನ್ನ ಕಾಯುತ್ತ  ಹಣ್ಣಿಗಾಗಿ ಆಶೆಯ ಕಣ್ಣುಗಳಿಂದ ನೋಡುತ್ತಾ ಇರುತ್ತಾರೆ . 


Photo by Suraj R on Unsplash

ಹೀಗಿರುವಾಗ ಒಮ್ಮೆ ಇವರ ಮಗ ಔರಂಗಜೇಬ್ ಯಾರಿಗೂ ತಿಳಿಯದ ಹಾಗೆ ಎಲ್ಲಾ ಮಾವಿನ ಹಣ್ಣುಗಳನ್ನ ತಿನ್ನುತ್ತಾನೆ.  


ಮಾವಿನ ಹಣ್ಣಿಗಾಗಿ ಹಗಲು ಕನಸು ಕಾಣುತ್ತಿದ್ದ  ರಾಜ ಷಹಜಹಾನ್ ಗೆ ಮರದಲ್ಲಿ ಹಣ್ಣುಗಳು ಇಲ್ಲಾದಿರುವುದು ನೋಡಿ ಸಿಕ್ಕಾಪಟ್ಟೆ ಕೋಪಬರುತ್ತದೆ .ಅನಂತರ  ಹಣ್ಣುಗಳನ್ನ ಯಾರು ಕಿತ್ತಿದ್ದಾರೆ ಎಂದು ಪತ್ತೆಹಚ್ಚಲು ಹೋದಾಗ ತನ್ನ ಮಗ ಔರಂಗಜೇಬ್ ಈ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಾಗ ,ಸಿಟ್ಟಾದ ಷಹಜಹಾನ್ ಆತನನ್ನ  ಒಂದು ರೂಮಿನಲ್ಲಿ    ಕೂಡಿಹಾಕುತ್ತಾನೆ. ನಂತರ ಷಹಜಹಾನ್ ಗೆ  ಇದ್ದ  ಮಾವಿನಹಣ್ಣಿನ ಮೇಲಿನ  ಆ ದಿನದ ಆಶೆಯ ದಾಹವನ್ನ ನಿವಾರಿಸಲು  ಸಾಮ್ರಾಜ್ಯಶಾಹಿಯ  ಅಡಿಗೆಮನೆಯಲ್ಲಿ ಬಗೆಬಗೆಯ  ಪಾಕವಿಧಾನಗಳನ್ನು ತಯಾರಿಸಿ ಬಡಿಸುತ್ತಾರೆ.   

Photo by Daria Shevtsova from Pexels

 ವಿಶೇಷವೇನಂದ್ರೆ ಮುಂದೆ ಔರಂಗಜೇಬ್ ಗೆ ಹಿರಾಬಾಯ್ ಅವರೊಂದಿಗಿನ ಪ್ರೇಮಕಥೆಯು ಈ  ಮಾವಿನಹಣ್ಣಿನೊಂದಿಗೆ  ಹೆಣೆದುಕೊಂಡಿದೆ. 

ಒಮ್ಮೆ ಔರಂಗಜೇಬ ತನ್ನ ಆಂಟಿಯ ಮನೆಗೆ ಬಂದಾಗ ಇವರ ಕಣ್ಣುಗಳು  ಮಾವಿನ ಮರದಲ್ಲಿ ಹಣ್ಣನು ಕುಯುತ್ತಾ  ಹಾಡುತಿದ್ದ ಹಿರಾಬಾಯ್ ಕಡೆ ಹೋಗುತ್ತದೆ. ಮೊದಲ ನೋಟದ್ಲಲೇ ಮಾವಿನ ತೋಟದಲ್ಲಿ ಔರಂಗಜೇಬನಿಗೆ ಹಿರಾಬಾಯ್ ಮೇಲೆ ಪ್ರೀತಿಯಾಗುತ್ತದೆ ,ಅಲ್ಲಿಂದ ಆಗಿದ್ದು ಎಲ್ಲಾ  ಇತಿಹಾಸ 

ನೋಡಿದ್ರಲ್ಲಾ   ನಮ್ಮ ಮಾವಿನ ಹಣ್ಣು ಏನೆಲ್ಲಾ ಕಿತಾಪತಿ ಮಾಡಿದೆಂತ , ಇತಿಹಾಸದಲ್ಲಿ ತನ್ನದೇ ಅದ ಸ್ಥಾನವನ್ನು ತಗೆದ್ಕೊಂಡಿದೆ 

Photo by Ali Zolghadr on Unsplash


ಈಗ ಇಷ್ಟೊಂದು ಇತಿಹಾಸ ಇರುವ  ಮಾವಿನ ಹಣ್ಣಿನ ಬಗ್ಗೆ  ನಿಮ್ಮ ಅನಿಸಿಕೆ  ಏನೆಂದು  ಹಂಚಿಕೊಳ್ಳಿ
 











0 ಕಾಮೆಂಟ್‌ಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ