ಶನಿವಾರ, ಡಿಸೆಂಬರ್ 25, 2021

ಬಿಸಿ ನೀರು ಒಳ್ಳೆಯದ ? ತಣ್ಣನೆಯ ನೀರು ಒಳ್ಳೆಯದ ?

 ಬೆಳಿಗ್ಗೆ ಎದ್ದು ಕೂಡಲೇ ನೀರು ಕುಡಿದ್ರೆ ಅನೇಕ ರೋಗಗಳಿಂದ ಮುಕ್ತರಾಗಬಹುದು .ದೇಹದ ಪ್ರತಿಯೊಂದು ಕಾರ್ಯವು ಸಲೀಸಾಗಿ ನಡೆಯಬೇಕಾದ್ರೆ  ನೀರು ಅತ್ಯಗತ್ಯ.  ಸರಿಯಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹ ಇದು ಅಗತ್ಯವಾಗಿರುತ್ತದೆ.


Photo by Nathan Dumlao on Unsplash


 ನಮ್ಮ ದೇಹದಿಂದ ನೀರ್ ಅನೇಕ ರೀತಿಯಲ್ಲಿ ಖಾಲಿಯಾಗುತ್ತಿರುತ್ತದೆ ಉಸಿರಾಟದ ಕಾರಣದಿಂದಾಗಿ ನಾವು ದಿನಕ್ಕೆ ಸರಾಸರಿ 250 ಮಿಲಿ ಕಳೆದುಕೊಳ್ಳುತ್ತೇವೆ, ಕೆಲಮೊಮ್ಮೆ ನಮ್ಮ ದೇಹದಿಂದ ನೀರು ಖಾಲಿ ಆಗುವ ಪ್ರಮಾಣವು  ಹವಾಮಾನ ಮತ್ತು ನಾವು ಮಾಡುತ್ತಿರುವ ಚಟುವಟಿಕೆಯ ಮೇಲೆ ಆಧರಿಸಿದೆ. ಪ್ರತಿದಿನ ಸಾಕಷ್ಟು ನೀರನ್ನು ಕುಡಿಯುವ ಮೂಲಕ ನಮ್ಮ ದೇಹದಿಂದ ಖಾಲಿಯಾದ ನೀರನ್ನು ಮತ್ತೆ ದೇಹಕ್ಕೆ ಒದಗಿಸಬೇಕು. 


Photo by Elisa Hane on Unsplash


ಪ್ರತಿ ದಿನ ಕನಿಷ್ಠ , 2 ಲೀಟರ್ - ದೇಹಕ್ಕೆ ಅತ್ಯಗತ್ಯವಾಗಿದೆ ಆದರೆ ಎಷ್ಟೋ ಜನರಿಗೆ ಒಂದು ಸಣ್ಣ ಕನ್ಫ್ಯೂಷನ್ ಇದೆ ಅದೇನಂದ್ರೆ ಬಿಸಿನೀರು ಕುಡಿಯಬೇಕಾ ? ಅಥವಾ ತಣ್ಣನೆಯ ನೀರು ಕುಡಿಯಬೇಕಾ ? ಎಂದು. ತಜ್ಞರು ಹಾಗು ಪ್ರಯೋಗಗಳು ಸಾಬೀತು ಮಾಡಿರುವುದು ಏನೆಂದ್ರೆ ಉಗುರು ಬೆಚ್ಚಗಿನ ನೀರು ದೇಹಕ್ಕೆ ತುಂಬ  ಒಳ್ಳೇದು ಎಂದು  ಯಾಕೆಂದ್ರೆ? 

Photo by Yosef Ariel on Unsplash


ಬೆಚ್ಚನೆಯ ನೀರಿಂದ ನಮ್ಮ ದೇಹದ ಒಳಾಂಗಗಗಳನ್ನ  ಮತ್ತು ಕರುಳಿನ ಚಲನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಬೆಚ್ಚಗಿನ ನೀರು ಹೆಚ್ಚು ಪರಿಣಾಮಕಾರಿಯಾಗಿದೆ

ಬೆಚ್ಚಗಿನ ನೀರು ರಕ್ತದ ಹರಿವನ್ನು ಉತ್ತೇಜಿಸುತ್ತದೆ, ಇದು ತಲೆನೋವು ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಅತ್ಯುತ್ತಮ ಪರಿಹಾರವಾಗಿದೆ.

ಬೆಚ್ಚನೆಯ ನೀರು  ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ

ಬೆಚ್ಚನೆಯ ನೀರು . ನಿಮ್ಮ ದೇಹದಾದ್ಯಂತ ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಗಿಸಲು ಸಹಾಯ ಮಾಡುತ್ತದೆ.

ಬಿಸಿನೀರು ಕುಡಿಯುವುದರಿಂದ ನಿಮ್ಮ ಚರ್ಮದ  ಹೊಳಪನ್ನ ಹೆಚ್ಚಿಸುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.


                                                          Photo by Aaron Burden on Unsplash

ಹಾಗಾಗಿ  ನಮ್ಮ ದೇಹದ ಆರೋಗ್ಯವನ್ನ ಕಾಪಾಡುವ ಬೆಚ್ಚನೆಯ ನೀರನ್ನು ಹೆಚ್ಚು ಹೆಚ್ಚು ಕುಡಿದು ನಿಮ್ಮ ದೇಹವನ್ನ ಸದೃಢವಾಗಿ ಇಟ್ಟುಕೊಳ್ಳಿ 



ಶುಕ್ರವಾರ, ಡಿಸೆಂಬರ್ 24, 2021

ಮೊನಾಲಿಸಾ ಪೇಂಟಿಂಗ್ ಹಿಂದಿರುವ ರೋಚಕ ಕಹಾನಿ

 ಮೊನಾಲಿಸಾ ಚಿತ್ರ ಯಾರಿಗೆ ಇಷ್ಟವಾಗಲ್ಲಾ ಹೇಳಿ . ಕವಿಗಳಂತೂ ಮೊನಾಲಿಸಾ ನಗುವಿನಾ  ಸಾರವನ್ನ  ತಮ್ಮ ಕವಿತೆಗಳ ಮೂಲಕ ಹೋಗುಳುತ್ತಾನೆ ಇರುತ್ತಾರೆ . 

Photo by Eric TERRADE on Unsplash

ಈ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರಾದ ಲಿಯೊನಾರ್ಡೊ ಡಾ ವಿನ್ಸಿ ಈ ವಿಶ್ವ ಕಂಡ ಅಮೋಘ ಪ್ರತಿಭೆ.ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಮೋಸ್ಟ್ ವ್ಯಾಲ್ಯೂಯೇಬಲ್ ‌ಪೇ೦ಟಿಂಗ್ ಎಂದು ದಾಖಲಾಗುತ್ತದೆ. ಮೊನಾಲಿಸಾ ಇಡೀ ಜಗತ್ತಿನಲ್ಲೇ ಪ್ರಸಿದ್ದವಾದ , ಅತಿ ಹೆಚ್ಚು ಖರೀದಿಸಿದ ತೈಲ ವರ್ಣಚಿತ್ರವಾಗಿದೆ.ಈ ಚಿತ್ರದ ಬಗ್ಗೆ ಅನೇಕ ದಂತಕಥೆಗಳಿವೆ . 

ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ  ಲಿಸಾ ಗೆರಾರ್ಡಿನಿ ಯಾ ಚಿತ್ರ ಎಂದು ನಂಬಲಗಿದೆ .  ಅವಳು ಫ್ಲಾರೆನ್ಸ್‌ನ ಫ್ರಾನ್ಸೆಸ್ಕೊ ಡೆಲ್ ಜಿಯೊಕೊಂಡೊ ಎಂಬ ಶ್ರೀಮಂತ ರೇಷ್ಮೆ ವ್ಯಾಪಾರಿಯ ಹೆಂಡತಿಯಾಗಿದ್ದಳು. ಅವರ ನೆನಪಿಗಾಗಿ ಇಟಲಿಯ ಲಿಯೊನಾರ್ಡೊ ಡಾ ವಿನ್ಸಿ ಎಂಬ ಚಿತ್ರಗಾರನಿಂದ ರಚಿಸಿದರು ಎಂದು ಹೇಳಲಾಗಿದೆ . 

Photo by Free Birds on Unsplash

ಇನ್ನು ಕೆಲವರ ಪ್ರಕಾರ ಮೊನಾಲಿಸಾ ಚಿತ್ರವೂ   ಲಿಯೊನಾರ್ಡೊ ಡಾ ವಿನ್ಸಿ ಅವರ ತಾಯಿ ಯಾ ಚಿತ್ರವಾಗಿದೆ ಎಂದು ಹೇಳುತ್ತಾರೆ , ತಾಯಿಯನ್ನ ಅಪಾರವಾಗಿ ಪ್ರೀತಿಸುತ್ತಿದ್ದ   ಲಿಯೊನಾರ್ಡೊ ಡಾ ವಿನ್ಸಿ  ಅವರ ಸವಿನೆನಪಿಗಾಗಿ ಇದನ್ನ ಚಿತ್ರಿಸಿದರು ಎಂದು ಹೇಳಲಾಗಿದೆ . ಮತ್ತೊಂದು ಸಿದ್ಧಾಂತವು ವಾಸ್ತವವಾಗಿ ಲಿಯೊನಾರ್ಡೊ ಅವರ ಭಾವಚಿತ್ರವೇ  ಮಹಿಳೆಯ  ರೂಪದಲ್ಲಿ  ಚಿತ್ರಿಸಿದರೆ ಎಂದು ಹೇಳಲಾಗಿದೆ .1519ರಲ್ಲಿ  ಲಿಯೊನಾರ್ಡೊ ಡಾ ವಿನ್ಸಿ ಯಾ ಮರಣದ ನಂತರ    ಭಾವಚಿತ್ರವನ್ನು ಫ್ರೆಂಚ್ ಅರಮನೆಗಳಲ್ಲಿ ಸೇರಿಸಲಾಯಿತು. ಇದು ರಾಜಮನೆತನದ ಸಂಗ್ರಹದ ಭಾಗವಾಯಿತು.

ಆದರೆ ಈ ಪೇಂಟಿಂಗ್ ಗೆ ಹೆಚ್ಚು ಪ್ರಚಾರ ಸಿಕ್ಕಿದು ಅದರ ಕಳ್ಳತನವಾದಗ 


Photo by Dabbas on Unsplash


"ಮೋನಾಲಿಸಾ" ಚಿತ್ರವನ್ನ ವಿನ್ಸೆಂಜೊ ಪೆರುಗ್ಗಿಯಾ ಎಂಬ ಇಟಲಿಯ ಪ್ರಜೆ 1911 ರ ಆಗಸ್ಟ್ 20 ರಿಂದ 21 ರ  ರಾತ್ರಿಯಲ್ಲಿ  ಯಾರಿಗೂ ತಿಳಿಯದ ಹಾಗೆ ಅದನ್ನ ಕದ್ದನು. ಆತನ ಪ್ರಕಾರ ಈ ಚಿತ್ರವು ಇಟಲಿಗೆ ಸೇರಿದ್ದು , ಕಾರಣ  ಲಿಯೊನಾರ್ಡೊ ಡಾ ವಿನ್ಸಿ ಇಟಲಿಯವನು ಆಗಿದ್ದ ಫ್ರಾನ್ಸ್ ಅದರ ಮೇಲೆ ಹಕ್ಕನ್ನು ಹೊಂದಿರುವುದು ಆತನಿಗೆ ಇಷ್ಟವಿರಲಿಲ್ಲಾ ಹಾಗಾಗಿ ಆತ ಅದನ್ನ ಕದ್ದನು .


 ಆ ನಂತರ ಫ್ರಾನ್ಸ್ ಸರ್ಕಾರ ಎಲ್ಲಾ ಕಡೆ ಹುಡುಕಿದರೂ ಅವ್ರಿಗೆ ಈ  ಪೇಂಟಿಂಗ್ ಸಿಗಲಿಲ್ಲಾ ಆದರೆ ಫ್ರಾನ್ಸ್  ಜನರು ಈ ವಿಷ್ಯವನ್ನ ಕೇಳಿ ಆಸಕ್ತಿಯಿಂದ ಪೇಂಟಿಂಗ್ ನೇತುಹಾಕಿದ ಜಾಗವನ್ನ ನೋಡಲು ಬರುತ್ತಿದ್ದರು ಇದ್ರಿಂದ ಫ್ರಾನ್ಸ್  ದೇಶದಲ್ಲಿ ಆ ಪೇಂಟಿಂಗ್  ವಿಶೇಷವಾದ ಸ್ಥಾನ ಪಡೆದಿತ್ತು ಎರಡು ವರ್ಷಗಳ ನಂತರ   ಫ್ಲಾರೆನ್ಸ್‌ನಲ್ಲಿನ ಕಲಾ ವ್ಯಾಪಾರಿಯೊಬ್ಬರು ವ್ಯಕ್ತಿಯೊಬ್ಬರು ತನಗೆ  ಮೊನಾಲಿಷಾ ಚಿತ್ರಕಲೆಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಫ್ರಾನ್ಸ್  ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎಚೆತ್ತ ಫ್ರಾನ್ಸ್ ಸರ್ಕಾರ ಮೊನಾಲಿಸಾ ಚಿತ್ರ ಕದ್ದ ಕಳ್ಳನನ್ನ ಬಂದಿಸಿ , ಪೇಂಟಿಂಗ್ ನ್ನ ತನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ  


 ಆ ನಂತರ ಫ್ರಾನ್ಸ್‌  ಕಾನೂನಿನ ಪ್ರಕಾರ ಮೊನಾಲಿಸಾ ಪೇ೦ಟಿಂಗನ್ನು ಮಾರಲು ಅಥವಾ ಖರೀದಿಸಲು ಮಾಡುವ೦ತಿಲ್ಲ ಹಾಗು ಇದಕ್ಕೆ ಬೇಕಾದ ಸೂಕ್ತವಾದ ಭದ್ರತೆಯನ್ನ ಒದಗಿಸಿದರು.  ಅಲ್ಲಿಂದ ಮೊನಾಲೀಶ ಪೇಂಟಿಂಗ್ ಜಗತ್ ಪ್ರಸಿದ್ಧವಾಗುತ್ತೆ  




ಬುಧವಾರ, ಡಿಸೆಂಬರ್ 22, 2021

ಫೇಸ್ಬುಕ್ ಶುರುವಿನ ಹಿಂದೆಯಿದೆ ಒಂದು ರೋಚಕ ಕಥೆ

  • ಫೇಸ್ಬುಕ್ ಆದುನಿಕ ಕಾಲದ ಸಂಪರ್ಕ ಸೇತುವೆ  ಚಿಕ್ಕಮಗುವಿಂದ ಹಿಡಿದು ದೊದ್ದವರವರೆಗೂ ಪ್ರತಿಯೊಬ್ಬರು ಫೇಸ್ಬುಕ್ ಮೇಲೆ ಎಷ್ಟೋ ವಿಷಯಗಳಿಗೆ ಅವಲಂಬಿತರಗಿದ್ದಾರೆ 

Photo by Firmbee.com on Unsplash


 ಈ ಫೇಸ್ಬುಕ್ ಶುರುವಾದ ರೋಚಕ ಕಥೆಯನ್ನ ಕೇಳಿದ್ರೆ ನೀವು ಆಶ್ಚರ್ಯಪಡ್ತೀರಾ !!!

Photo by Solen Feyissa on Unsplash


2003 ರಲ್ಲಿ, ಹಾರ್ವರ್ಡ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ ಜುಕರ್‌ಬರ್ಗ್ ಅವನ್ನ  collageನ ಸ್ಟೂಡೆಂಟ್ ಗಳ  ಜೊತೆ ಸಮಯವನ್ನ ಕಳೆಯಲು  ಫೇಸ್‌ಮ್ಯಾಶ್ ಎಂಬ ವೆಬ್‌ಸೈಟ್‌ನ್ನ ಶುರು ಮಾಡುತ್ತಾನೆ.  

Photo by Austin Distel on Unsplash


ಅವನ್ನ ವೆಬ್ಸೈಟ್ famous ಆಗುವುದಕ್ಕೆ  ತನ್ನ ಚಾಣಕ್ಷತೆ ಬಳಸಿ  ಕಾಲೇಜಿನ   ಹಾಸ್ಟೆಲ್ ನಲ್ಲಿದ್ದ  ಕಂಪ್ಯೂಟರ್ ನ್ನ  ಹ್ಯಾಕಿಂಗ್ ಮಾಡಿ ಅಲ್ಲಿದ್ದ ಕೆಲವು ಫೋಟೋಗಳನ್ನ ತಗೆದುಕೊಂಡು ತನ್ನ ವೆಬ್ಸೈಟ್ ಗೆ ಅಪ್ಲೋಡ್  ಮಾಡಿದ.

ವೆಬ್‌ಸೈಟ್ ಬಳಸುವ  ವಿದ್ಯಾರ್ಥಿಗಳು  ಇಬ್ಬರು ವಿದ್ಯಾರ್ಥಿಗಳ ಫೋಟೋಗಳನ್ನು ಅಕ್ಕಪಕ್ಕದಲ್ಲಿ  ಇಟ್ಟು ಹೋಲಿಸಿ  ಯಾರು "ಹಾಟ್" ಮತ್ತು ಯಾರು "ಅಲ್ಲ" ಎಂಬುದನ್ನು ನಿರ್ಧರಿಸಬಹುದಿತ್ತು . 

Photo by Alexander Shatov on Unsplash


 ಇದರಿಂದ  ಆ ವೆಬ್ಸೈಟ್ ತುಂಬ ಫೇಮಸ್ ಆಯಿತು.   ಕೇವಲ 4 ಗಂಟೆಗಳಲ್ಲಿ 22,000 ವೀಕ್ಷಣೆಗಳನ್ನು ಆಕರ್ಷಿಸಿತು. ಜುಕರ್‌ಬರ್ಗ್‌ ಹಾಸ್ಟೆಲ್ ನ ಕಂಪ್ಯೂಟರ್ ನ್ನ ಹ್ಯಾಕ್ ಮಾಡಿ ಫೋಟೋಗಳನ್ನ ಕದ್ದಿರುವ ವಿಷಯ ತಿಳಿದ ಹಾರ್ವರ್ಡ್‌ನ ವಿಶ್ವವಿದ್ಯಾನಿಲಯವು ಕೆಲವೇ ದಿನಗಳಲ್ಲಿ ಆ ವೆಬ್ಸೈಟ್ ನ್ನ ಮುಚ್ಚಿಸಿತು. ಜುಕರ್‌ಬರ್ಗ್, ಕಾಲೇಜ್ ನಿಂದ ಸಸ್ಪೆಂಡ್ ಆಗುವುದನ್ನ ತಮ್ಮ ಬುದ್ದಿವಂತಿಕೆಯಿಂದ ಹೇಗೋ ತಪ್ಪಿಸಿಕೊಂಡರು.

Photo by Glen Carrie on Unsplash

ಅ ನಂತರ ಜುಕರ್‌ಬರ್ಗ್ ಫೇಸ್ ಮಾಸ್ ಗೆ ಸಿಕ್ಕ ಜನಪ್ರಿಯತೆಯನ್ನ ಗಮನಿಸಿ, ಹೊಸ ವೆಬ್ಸೈಟ್ ಮಾಡುವ ಆಲೋಚನಿಗೆ ಬಂದಿದ್ದ . ಹಾರ್ವರ್ಡ್‌ನಲ್ಲಿರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲು ಬಳಸಬಹುದಾದ ಸಾಮಾಜಿಕ ನೆಟ್‌ವರ್ಕಿಂಗ್ ನ ವೆಬ್ಸೈಟ್ ನ್ನ ಅತಿ ಬೇಗ ಶುರುಮಾಡಿದ್ದ. ಅದರ ಬಗ್ಗೆ ಕಾಲೇಜು ನ ಪ್ರತಿಯೊಬ್ಬರಿಗೆ ಪಾಂಪ್ಲೆಟ್ ಹಂಚುವ ಮೂಲಕ ತಿಳಿಸಿದ .ಕಾಲೇಜು ನ ಎಲ್ಲಾ ವಿದ್ಯಾರ್ಥಿಗಳು ಸಂತೋಸದಿಂದ ಅದನ್ನ ಬರಮಾಡಿಕೊಂಡರು .

Photo by Alexander Shatov on Unsplash

ಫೇಸ್ ಮಾಸ್ ಅನ್ನುವ ಹೆಸರು ಫೇಸ್ಬುಕ್ಯಾಗಿ ಬದಲಾಯಿತು. ಫೇಸ್ಬುಕ್ ಆರಂಭವಾದ ಕೇವಲ 24 ಗಂಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಸುಮಾರು 1,200 ವಿದ್ಯಾರ್ಥಿಗಳು ತಮ್ಮ ಇಮೇಲ್ ಇಡಿ ಗಳನ್ನ ಬಳಸಿ ಸೈನ್ ಅಪ್ ಅಗಿದರು. ಕೇವಲ ಒಂದು ತಿಂಗಳೊಳಗೆ, ಎಲ್ಲಾ ಹಾರ್ವರ್ಡ್ ಪದವಿಪೂರ್ವ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಂದಿ ಫೇಸ್ಬುಕ್ ನಲ್ಲಿ ಪ್ರೊಫೈಲ್ ಹೊಂದಿದ್ದರು.ಕೆಲವೇ ದಿನಗಳಲ್ಲಿ U.S. ನಲ್ಲಿದ್ದ ಇತರ ಮೂರು ಕಾಲೇಜು ಕ್ಯಾಂಪಸ್‌ನ ವಿದ್ಯಾರ್ಥಿಗಳು ಇದರಿಂದ ಆಕರ್ಷಿತರಾಗಿ ಬಳಸಲು ಶುರು ಮಾಡಿದರು.


Photo by Souvik Banerjee on Unsplash


ನಂತರ ಆಗಸ್ಟ್ 2005 ರಲ್ಲಿ ವೆಬ್ಸೈಟ್ ಖರೀದಿಸದ ನಂತರ Facebook.com ಆಯಿತು. ನಂತರ ಅದು ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿತು,2006ರಲ್ಲಿ ಫೇಸ್ಬುಕ್ ನ್ನ ಪ್ರಪಂಚ ಎಲ್ಲಾ ವರ್ಗದ ಜನ ತಮ್ಮ ಮೇಲ್ ಇಡಿ ಮೂಲಕ ಪ್ರೊಫೈಲ್ ನ್ನ ಹೊಂದಲು ಶುರುಮಾಡಿದರು .ಇಂದು ಫೇಸ್ಬುಕ್ ನಮ್ಮನಿಮ್ಮೆಲ್ಲರ ಮನೆಮಾತಾಗಿದೆ.



<

ಇನ್ನಷ್ಟು ಓದಿ »