ಬಿಸಿ ನೀರು ಒಳ್ಳೆಯದ ? ತಣ್ಣನೆಯ ನೀರು ಒಳ್ಳೆಯದ ?
ಬೆಳಿಗ್ಗೆ ಎದ್ದು ಕೂಡಲೇ ನೀರು ಕುಡಿದ್ರೆ ಅನೇಕ ರೋಗಗಳಿಂದ ಮುಕ್ತರಾಗಬಹುದು .ದೇಹದ ಪ್ರತಿಯೊಂದು ಕಾರ್ಯವು ಸಲೀಸಾಗಿ ನಡೆಯಬೇಕಾದ್ರೆ ನೀರು ಅತ್ಯಗತ್ಯ. ಸರಿಯಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹ ಇದು ಅಗತ್ಯವಾಗಿರುತ್ತದೆ.
| Photo by Nathan Dumlao on Unsplash |
ನಮ್ಮ ದೇಹದಿಂದ ನೀರ್ ಅನೇಕ ರೀತಿಯಲ್ಲಿ ಖಾಲಿಯಾಗುತ್ತಿರುತ್ತದೆ ಉಸಿರಾಟದ ಕಾರಣದಿಂದಾಗಿ ನಾವು ದಿನಕ್ಕೆ ಸರಾಸರಿ 250 ಮಿಲಿ ಕಳೆದುಕೊಳ್ಳುತ್ತೇವೆ, ಕೆಲಮೊಮ್ಮೆ ನಮ್ಮ ದೇಹದಿಂದ ನೀರು ಖಾಲಿ ಆಗುವ ಪ್ರಮಾಣವು ಹವಾಮಾನ ಮತ್ತು ನಾವು ಮಾಡುತ್ತಿರುವ ಚಟುವಟಿಕೆಯ ಮೇಲೆ ಆಧರಿಸಿದೆ. ಪ್ರತಿದಿನ ಸಾಕಷ್ಟು ನೀರನ್ನು ಕುಡಿಯುವ ಮೂಲಕ ನಮ್ಮ ದೇಹದಿಂದ ಖಾಲಿಯಾದ ನೀರನ್ನು ಮತ್ತೆ ದೇಹಕ್ಕೆ ಒದಗಿಸಬೇಕು.
| Photo by Elisa Hane on Unsplash |
ಪ್ರತಿ ದಿನ ಕನಿಷ್ಠ , 2 ಲೀಟರ್ - ದೇಹಕ್ಕೆ ಅತ್ಯಗತ್ಯವಾಗಿದೆ ಆದರೆ ಎಷ್ಟೋ ಜನರಿಗೆ ಒಂದು ಸಣ್ಣ ಕನ್ಫ್ಯೂಷನ್ ಇದೆ ಅದೇನಂದ್ರೆ ಬಿಸಿನೀರು ಕುಡಿಯಬೇಕಾ ? ಅಥವಾ ತಣ್ಣನೆಯ ನೀರು ಕುಡಿಯಬೇಕಾ ? ಎಂದು. ತಜ್ಞರು ಹಾಗು ಪ್ರಯೋಗಗಳು ಸಾಬೀತು ಮಾಡಿರುವುದು ಏನೆಂದ್ರೆ ಉಗುರು ಬೆಚ್ಚಗಿನ ನೀರು ದೇಹಕ್ಕೆ ತುಂಬ ಒಳ್ಳೇದು ಎಂದು ಯಾಕೆಂದ್ರೆ?
| Photo by Yosef Ariel on Unsplash |
ಬೆಚ್ಚನೆಯ ನೀರಿಂದ ನಮ್ಮ ದೇಹದ ಒಳಾಂಗಗಗಳನ್ನ ಮತ್ತು ಕರುಳಿನ ಚಲನಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಬೆಚ್ಚಗಿನ ನೀರು ಹೆಚ್ಚು ಪರಿಣಾಮಕಾರಿಯಾಗಿದೆ
ಬೆಚ್ಚಗಿನ ನೀರು ರಕ್ತದ ಹರಿವನ್ನು ಉತ್ತೇಜಿಸುತ್ತದೆ, ಇದು ತಲೆನೋವು ಮತ್ತು ಉರಿಯೂತಕ್ಕೆ ಚಿಕಿತ್ಸೆ ನೀಡಲು ಅತ್ಯುತ್ತಮ ಪರಿಹಾರವಾಗಿದೆ.
ಬೆಚ್ಚನೆಯ ನೀರು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ
ಬೆಚ್ಚನೆಯ ನೀರು . ನಿಮ್ಮ ದೇಹದಾದ್ಯಂತ ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಗಿಸಲು ಸಹಾಯ ಮಾಡುತ್ತದೆ.
ಬಿಸಿನೀರು ಕುಡಿಯುವುದರಿಂದ ನಿಮ್ಮ ಚರ್ಮದ ಹೊಳಪನ್ನ ಹೆಚ್ಚಿಸುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.
ಹಾಗಾಗಿ ನಮ್ಮ ದೇಹದ ಆರೋಗ್ಯವನ್ನ ಕಾಪಾಡುವ ಬೆಚ್ಚನೆಯ ನೀರನ್ನು ಹೆಚ್ಚು ಹೆಚ್ಚು ಕುಡಿದು ನಿಮ್ಮ ದೇಹವನ್ನ ಸದೃಢವಾಗಿ ಇಟ್ಟುಕೊಳ್ಳಿ


0 ಕಾಮೆಂಟ್‌ಗಳು:
ಕಾಮೆಂಟ್ ಪೋಸ್ಟ್ ಮಾಡಿ
ಇದಕ್ಕೆ ಸಬ್‌ಸ್ಕ್ರೈಬ್ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]
<< ಮುಖಪುಟ