ಮಂಗಳವಾರ, ಜೂನ್ 8, 2021

ಮೂರನೇ ಅಲೆಗೆ ನೀವುಗಳು ಎಷ್ಟು ಸಿದ್ದರಾಗಿದೀರಾ ?


ಕೊರೋನಾ ಪ್ರಕರಣಗಳು ಕಡಿಮೆಯಾದ ತಕ್ಷಣ, ನಾವೆಲ್ಲರೂ ನಮಗಾದ  ನಷ್ಟ ಪ್ರಾಣಹಾನಿಗಳನ್ನ ಮರೆತು, ಬೇಕಾಬಿಟ್ಟಿ ಓಡಾಡುವುದು ಹಾಗೂ ಗುಂಪು ಗುಂಪಾಗಿ  ಸೇರುವುದು ಮಾಡಿದ್ರೆ, ಎರಡನೇ ಅಲೆಯ ವೈರಸ್ಗಿಂತ ವೇಗವಾಗಿ ಹಾಗೂ ಇನ್ನೂ ಹೆಚ್ಚು ಪ್ರಬಲವಾಗಿ ಮತೊಮ್ಮೆ ಕೊರೋನಾ ಹರಡುವುದು ಅಂತೂ ನಿಜ. 


3 ನೇ ಅಲೆಯು "ಅನಿವಾರ್ಯ" ಎಂದು ಸರ್ಕಾರದ ಉನ್ನತ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಗವಾನ್ ಕೂಡ ಈಗಾಗಲೇ ಹೇಳಿದ್ದಾರೆ. ಅವರ ಪ್ರಕಾರ 3 ನೇ ಅಲೆಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ಅಪಾಯಕ್ಕೆ ಒಳಗಾಗಬಹುದು ಎಂದು ಹೇಳಿದ್ದರೆ. 


ಆದ್ದರಿಂದ ನಾವುಗಳೆಲ್ಲಾ  3 ನೇ ಅಲೆಗೆ ಮಾನಸಿಕವಾಗಿ ಸಿದ್ಧರಾಗಿರಬೇಕು. 

ಅಂದಾಜಿನ ಪ್ರಕಾರ ಈಗ ನಡೆಯುತ್ತಿರುವ ಎರಡನೇ ಅಲೆಯು, ಜುಲೈ ವೇಳೆಗೆ ಇಳಿಯಲಿದೆ ಮತ್ತು ಮೂರನೇ ಅಲೆಯು  ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಬಹುದು. 

ಹಾಗಾದ್ರೆ ಇದನ್ನ ಹೇಗೆ ಎದುರಿಸಬೇಕು ?. ಇಲ್ಲಿದೆ ನೋಡಿ ಒಂದಿಷ್ಟು ಮಾಹಿತಿಗಳು 

  • ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನ ಒದಗಿಸಿ , ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಓದು ಮುಗಿಸಿರುವ ಡಾಕ್ಟರ್ ಹಾಗು ನರ್ಸ್ ಗಳಿಗೆ  ಅವಕಾಶ ಕೊಡಬೇಕು , 
  • ಗ್ರಾಮ ಮಟ್ಟದಲ್ಲಿನ  ವೈದ್ಯಕೀಯ ಸೌಲಭ್ಯಗಳನ್ನ ಉತ್ತಮ ಮಟ್ಟದಲ್ಲಿ ಮಾಡಬೇಕು , ಅದರ  ಸಂಪೂರ್ಣ ಜವಾಬ್ದಾರಿಯು ಆ ಊರಿನ ಜಿಲ್ಲಾಧಿಕಾರಿಯ ಮೇಲೆ ಇರಬೇಕು . 


  • ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದ ವೇಳೆಗೆ ಕನಿಷ್ಠ 80% ಜನಸಂಖ್ಯೆಗೆ 2 ಡೋಸ್ ವ್ಯಾಕ್ಸಿನೇಷನ್ ನೀಡುವುದು  ಸರ್ಕಾರದ  ಗುರಿಯಾಗಬೇಕು.  
  • ಈಗ ಮಂತ್ರಿ ಮಂಡಲದಲ್ಲಿ , ಕೋವಿಡ್ ನಿಯಂತ್ರಣಕ್ಕೆ ಬೇಕಾದ  ಹಾಗೆ ವಿಂಗಡಿಸಿರುವ  ಮಂತ್ರಿಮಂಡಲದ  ಕಾರ್ಯವು ಕೋವಿಡ್   ಸಂಪೂರ್ಣ ನಿಯಂತ್ರಣವಾಗುವರೆಗೂ ಮುಂದುವರೆಯಬೇಕು.  . 



  • ಮಕ್ಕಳಿಗೆ  ವ್ಯಾಕ್ಸಿನೇಷನ್ಗಾಗಿ  ಕ್ಲಿನಿಕಲ್ ಪ್ರಯೋಗಗಳು ಅತಿ ಬೇಗ ಶುರು ಆಗ್ಬೇಕು 
           



  •  ಕೋವಿಡ್ ಸಂಬಂಧಿತ ಕೆಲವು  ನಿರ್ಬಂಧಗಳು ಈಗಿರುವ ಹಾಗೆ  ಮುಂದುವರೆಯಬೇಕು. ಯಾರೇ  ವ್ಯಕ್ತಿ ಮಾಸ್ಕ ಹಾಕದೆ ಇದ್ದರೆ ಹಾಗು ಮೂಗಿನ ಕೆಳಗೆ ಮಾಸ್ಕ ಹಾಕಿದ್ರೆ ಅವ್ರಿಗೆ ಅರಿವು ಆಗೋ ಹಾಗೆ ದಂಡವನ್ನ ವಿಧಿಸಬೇಕು.  





  • ಮಾಸ್ಕ ಜೊತೆಗೆ ಹ್ಯಾಂಡ್ ಗ್ಲೋವ್ಸ್ ನ್ನ ಹಾಕಲು ಆದೇಶಿಸಬೇಕು ಹಾಗೂ  ಖಡ್ಡಾಯ ಮಾಡಬೇಕು . 

             


  • ಕೋವಿಡ್ ಫೋರ್ಸ್ ತಂಡದ ರಚನೆಯಾಗಬೇಕು .ಹೇಗೆ ಟ್ರಾಫಿಕ್ ಫೋಲಿಸ್  ಇರುತ್ತಾರೋ ಹಾಗೆ ಕೋವಿಡ್ ಫೋರ್ಸ್ ರಚನೆಯಾಗಿ,  ಯಾರೇ  ಕೋವಿಡ್ ಸಂಬಂಧಿತ ನಿರ್ಬಂಧಗಳನ್ನ  ಮುರಿದರೆ ಮತ್ತು ಗುಂಪು ಗುಂಪಾಗಿ  ಸೇರಿದ್ರೆ ಅವ್ರಿಗೆ ತಕ್ಕ ಶಿಕ್ಷೆಯಾಗವ ಹಾಗೆ ಕಾನೂನುಗಳನ್ನ ಜಾರಿಗಳಿಸಬೇಕು ಹಾಗೂ  ಇವರುಗಳು ಕೋವಿಡ್ ನಿಯಂತ್ರಣದ ರೂವಾರಿಗಳು  ಆಗ್ಬೇಕು 

       


  • ಹೊರದೇಶದಿಂದ ಬರುವರಿಗೆ 15 ದಿನಗಳವರೆಗೂ  ಕ್ವಾರಂಟೈನ್ ಮಾಡಲೇಬೇಕು.  



  • ಕಂಪೆನಿಗಳಲ್ಲಿ ಅಗತ್ಯವಿರುವರು ಮಾತ್ರ ಪ್ರತಿ ದಿನ ಹೋಗುವ ವ್ಯವಸ್ಥೆ ಶುರುವಾಗಬೇಕು . ಹೆಚ್ಚಿನ ಜನರು ಮನೆಯಿಂದಾನೆ ಕೆಲಸ ಮಾಡೋ ತರ ಆಗ್ಬೇಕು , ಸರ್ಕಾರವೇ ಅಧಿಕಾರಿಗಳನ್ನ  ನಿಯಮಿಸಿ ಅಗತ್ಯ ಇರುವರಿಗೆ ಮಾತ್ರ ಅವ್ರ ಹುದ್ದೆಗೆ ತಕ್ಕ ಹಾಗೆ ಪ್ರತಿ ದಿನ ಹೋಗಲು ಪಾಸ್ ಗಳನ್ನ ತಿಂಗಳಿಗೊಮ್ಮೆ ಕೊಡಬೇಕು.   

 

  • ಹತ್ತಕ್ಕಿಂತ  ಹೆಚ್ಚು  ಜನ ಸೇರುವ ಎಲ್ಲಾ ರೀತಿಯ ಸೋಶಿಯಲ್ ಆಕ್ಟಿವಿಟಿಗಳನ್ನ ನಿಷೇದ್ದ ಮಾಡಲೇಬೇಕು , ನಿಯಮ ಮೀರಿದ್ದರೆ ತಕ್ಕ ಶಿಕ್ಷೆ ಹಾಗು ದಂಡವನ್ನು ಹಾಕಬೇಕು .  



  • ಜನರು ತಮ್ಮ ಮನೆಯಲ್ಲಿ ಇಮ್ಮ್ಯೂನಿಟಿ ಹೆಚ್ಚಿಸುವ ಆಹಾರಗಳನ್ನ  ಸೇವಿಸುವುದು  ಹಾಗೂ  ಯೋಗ ಮಾಡುವುದನ್ನ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು. 




ಸರ್ಕಾರ  ಕೊರೋನಾ ವಿರುದ್ಧ ಹೋರಾಡಲು  ಹೊರಡಿಸುವ  ಆದೇಶಗಳನ್ನ ಜನಗಳು ನೆಗ್ಲೆಕ್ಟ್ ಮಾಡದೇ ಪಾಲಿಸಬೇಕು . 

ನೆನಪಿರಲಿ ಕೋವಿಡ್ ನ ಜೊತೆ ಹೋರಾಟ ಬರಿ ಸರ್ಕಾರದ ಹೊಣೆಯಲ್ಲ , ನಮ್ಮ ನಿಮ್ಮಲ್ಲೇರ ಹಕ್ಕು ಕೂಡ ಜನ ಹಾಗು ಸರ್ಕಾರ ಜೊತೆಯಾದ್ರೆ  ಮಾತ್ರ ಕೋವಿಡ್ ನ್ನ ತಡೆಯಬಹುದು,

ನಮ್ಮ ನೆಗ್ಲೆಕ್ಟ್ ಯಿಂದ ಎರಡನೇ ಅಲೆಯಲ್ಲಿ ಸಾಕಷ್ಟು ನಷ್ಟಗಳನ್ನ ಅನುಭವಿಸಿದಿವಿ . ಈಗಲಾದ್ರೂ ನಾವುಗಳು ಬುದ್ದಿ ಕಲಿಯೋಣ ಹಾಗೂ  ನಮ್ಮ  ಸುತ್ತಮುತ್ತಲಿರುವರನ್ನ ಬುದ್ದಿವಂತರಾಗಿಸಿ  ಕೋವಿಡ್ ವಿರುದ್ಧ ಹೋರಾಡಿ ನಮ್ಮವರನ್ನ ಉಳಿಸಿಕೊಳ್ಳೋಣ.   

ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗು ವಿಚಾರವನ್ನು ಹಂಚಿಕೊಳ್ಳಿ 

0 ಕಾಮೆಂಟ್‌ಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ