ಸೋಮವಾರ, ಜೂನ್ 7, 2021

ಕರ್ನಾಟಕದ ಅನ್ ಲಾಕ್ ಭವಿಷ್ಯ ?

ಕರ್ನಾಟಕದ ಅನ್ ಲಾಕ್ ಭವಿಷ್ಯ ಇಂದು ನಿರ್ಧಾರವಾಗುವ ಸಾಧ್ಯತೆ ಇದ್ದು, ಈ ಹಿಂದೆ ಮಾನ್ಯ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ ಹಾಗೆ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆ ಆದ್ರೆ ಲಾಕ್ ಡೌನ್ ಸಡಲಿಕೆ ಎಂದು ಹೇಳಿದ್ದರು,

ಹಾಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅನ್ ಲಾಕ್ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿ ಜಿಲ್ಲೆಗಳ ಕೊರೋನಾ ಸ್ಥಿತಿಗತಿ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಹಾರಾಷ್ಟ್ರದಲ್ಲಿ ‘ಅನ್‌ಲಾಕ್ 2.0’ ಇಂದಿನಿಂದ ಜಾರಿಗೆ ಬರಲಿದ್ದು, ಸೋಂಕು ಇಳಿಮುಖ ಹಾಗು  ಹಾಸಿಗೆಗಳ  ಲಭ್ಯತೆ ಆಧಾರದಲ್ಲಿ  ಐದು ಹಂತಗಳಲ್ಲಿ ವಿಂಗಡಿಸಿ ಲಾಕ್‌ಡೌನ್ ತೆರವು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ನ್ ಲಾಕ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಿದರೆ ಕೊರೋನಾ ಮೂರನೇ ಅಲೆಯಿಂದ ಅಷ್ಟೊಂದು ದುಷ್ಪರಿಣಾಮ ಬೀರಲಿಕ್ಕಿಲ್ಲ ಎಂಬ ಅಭಿಪ್ರಾಯ ತಜ್ಞರದ್ದು. ಕೋವಿಡ್-19 ಬಗ್ಗೆ ಕಾಲಕಾಲಕ್ಕೆ ಸೂಚನೆ, ಸಲಹೆ ನೀಡುವ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ ಮೇಲೆ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣಗಳ ದರ ಶೇಕಡಾ 5ಕ್ಕಿಂತ ಕಡಿಮೆ ಬಂದ ಮೇಲೆ ಮಾತ್ರ ಮತ್ತು ಪಾಸಿಟಿವ್ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಬಂದ ಮೇಲೆ ಅನ್ ಲಾಕ್ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲಿದೆ.

ನ್ ಲಾಕ್ ಏನೋ ಆಯಿತು ಇನ್ನು ಸಮಸ್ಯೆ ಬರುವುದಿಲ್ಲಾ  ಎಂದು ಬೇಕಾಬಿಟ್ಟಿ ಓಡಾಡಬೇಡಿ  COVID-19 ನಿಂದ ನಿಮಗೆ ಏನೂ ಆಗಬಾರದೆಂದರೆ ನೀವು ಮಾಡಲಾಗುವುದೊಂದೇ, ಅದೇ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವುದು. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನೀವು ಮಾಡಬಹುದಾದ ಕೆಲವೊಂದು ವಿಷಯಗಳು ಇಲ್ಲಿವೆ.

  • ಕನಿಷ್ಟ 20 ಸೆಕೆಂಡುಗಳ ಕಾಲ ಆಗಾಗ್ಗೆ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ.
  • ನಿಮ್ಮ ಕೈಗಳಿಂದ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಡಿ, ವಿಶೇಷವಾಗಿ ತೊಳೆಯದ ಕೈಗಳಿಂದ.
  • ನೀರಿನ ವ್ಯವಸ್ಥೆ ಇಲ್ಲದಿರುವಂತಹ ಸಂದರ್ಭದಲ್ಲಿ ಆಲ್ಕೋಹಾಲ್ ಇರುವ ಸ್ಯಾನಿಟೈಸರ್ (ಕನಿಷ್ಟ ಶೇ. 60 ರಷ್ಟು ಆಲ್ಕೋಹಾಲ್ ಇರುವ) ಬಳಸಿ.
  • ಸೋಂಕಿತರೊಂದಿಗಿನ ಒಡನಾಟವನ್ನು ಆದಷ್ಟೂ ಕಡಿಮೆ ಮಾಡಿ ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ತಪ್ಪಿಸಿ. ರೋಗಿಗಳಿಂದ ಕನಿಷ್ಟಪಕ್ಷ 3 ರಿಂದ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು ಒಳಿತು.
  • ಸಾಮಾಜಿಕ ಅಂತರವೇ ಕೀಲಿಕೈ.
  • ಸೋಂಕು ಹರಡದಂತೆ ಕೈಗೊಳ್ಳಬೇಕಾದ ಉತ್ತಮ ಮುಂಜಾಗ್ರತಾ ಕ್ರಮವೆಂದರೆ ಮೂಗು ಮತ್ತು ಬಾಯನ್ನು ಮಾಸ್ಕ್ ನಿಂದ ಮುಚ್ಚಿಕೊಳ್ಳಬೇಕಾಗುತ್ತದೆ. ಜನ ಹೆಚ್ಚಾಗಿ ಸೇರುವ ಪ್ರದೇಶಗಳಿಗೆ ಹೋಗುವುದನ್ನು ತಡೆಯಬೇಕಾಗಿದೆ

0 ಕಾಮೆಂಟ್‌ಗಳು:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ [Atom]

<< ಮುಖಪುಟ